ಸಾಲು ಸಾಲು ಹಬ್ಬದ ವೇಳೆಯೇ ಗಗನಕ್ಕೇರಿದ ತರಕಾರಿ ಬೆಲೆ; ಕಾರಣ ಏನು? ಕಡಿಮೆಗೆ ಎಲ್ಲೆಲ್ಲಿ ಖರೀದಿ ಮಾಡಬಹುದು?..Vegetable

ಎಐ ಸಹಾಯದಿಂದ ನಿರ್ಮಿಸಿದ ಚಿತ್ರ
ಎಐ ಸಹಾಯದಿಂದ ನಿರ್ಮಿಸಿದ ಚಿತ್ರ
Published on
  • ದೀಪಾವಳಿ, ದಸರಾ ಸಾಲು ಹಬ್ಬಗಳ ಹೊತ್ತಲೇ ದಿನಸಿ, ತರಕಾರಿ ಬೆಲೆಯಲ್ಲಿ ಭಾರೀ ಏರಿಕೆ

  • ನಿರಂತರ ಮಳೆ, ಬರದಿಂದಾಗಿ ಸಂಕಷ್ಟಕ್ಕೀಡಾದ ರೈತರು ಮತ್ತು ಗ್ರಾಹಕರು

  • ಈರುಳ್ಳಿ ಬೆಲೆ 70, 200 ರೂ.ಗೆ ಏರಿಕೆಯಾದ ಶುಂಠಿ ಬೆಲೆ, ಸೊಪ್ಪುಗಳ ಬೆಲೆಯಲ್ಲೂ ಏರಿಕೆ

ಕರ್ನಾಟಕದಲ್ಲಿ ಮಾತ್ರವಲ್ಲ..ಇಡೀ ದೇಶದಾದ್ಯಂತ ದಿನದಿಂದ ದಿನಕ್ಕೆ ತರಕಾರಿ ಬೆಲೆಗಳು ಏರಿಕೆಯಾಗುತ್ತಿದೆ. ಒಂದೆಡೆ ಮಳೆಯಿಲ್ಲದೆ ಇಳುವರಿಗೆ ಸಮಸ್ಯೆಯಾಗುತ್ತಿದ್ದರೆ, ಮತ್ತೊಂದು ಕಡೆ ನಿರಂತರ ವರುಣನ ಅಬ್ಬರದಿಂದಾಗಿ ತರಕಾರಿಗಳು ಕೊಳೆತು ಮಾರುಕಟ್ಟೆಗೆ ಹೆಚ್ಚು ಬೆಳೆ ಬರದಂತಾಗಿದೆ. ಒಟ್ಟಾರೆಯಾಗಿ ಸಾಲು ಸಾಲು ಹಬ್ಬದ ಸಂಭ್ರಮ ವೇಳೆಯೇ ಗ್ರಾಹಕರು ಮತ್ತು ರೈತರ ಮೇಲೆ ಪರಿಣಾಮ ಬೀರಿದೆ.

ದಸರಾ ಮತ್ತು ದೀಪಾವಳಿಯಂತಹ ಸಾಲು ಸಾಲು ಹಬ್ಬಗಳು ಎಂಟ್ರಿಯಾಗುತ್ತಿರುವ ಹೊತ್ತಿನಲ್ಲಿಯೇ ತರಕಾರಿಗಳು, ಎಣ್ಣೆ ಸೇರಿದಂತೆ ನಿತ್ಯ ಬಳಕೆ ಮಾಡುವ ವಸ್ತುಗಳ ಬೆಲೆಯೂ ಗಗನಕ್ಕೇರಿದೆ. ದುಡಿಯುವ ವರ್ಗದ ಜನರ ವೇತನ ಹೆಚ್ಚಿಸದೇ, ಬೆಲೆ ಏರಿಕೆ ಬಿಸಿ ಮಾತ್ರ ಏರಿಕೆಯಾಗುತ್ತಿದೆ ಎನ್ನುವುದು ಗ್ರಾಹಕರ ದೂರು.

ಈರುಳ್ಳಿ, ಆಲೂಗಡ್ಡೆ ಬೆಲೆ ಏರಿಕೆ

ಸದ್ಯ ಮಾರುಕಟ್ಟೆ ಹಾಗೂ ದಿನಸಿ ಅಂಗಡಿಗಳಲ್ಲಿ ಈರುಳ್ಳಿ ಬೆಲೆಯೂ 80 ರೂಪಾಯಿಗೆ ದಾಟಿದರೆ, ಆಲೂಗಡ್ಡೆ ಬೆಲೆಯೂ ಕಳೆದ ತಿಂಗಳು ಇದ್ದ ಬೆಲೆಗಿಂತ ದುಪ್ಪಟ್ಟಾಗಿದೆ. ಇಷ್ಟು ಮಾತ್ರವಲ್ಲದೆ, ಸೊಪ್ಪು, ಕೊತ್ತಂಬರಿ, ಪುದೀನಾ ಸೇರಿದಂತೆ ಬೀನ್ಸ್​, ಕ್ಯಾರೆಟ್​​, ಸೌತೆಕಾಯಿ, ಬೀಟ್​ರೂಟ್​​ ಸೇರಿದಂತೆ ಹಸಿರು ತರಕಾರಿಗಳ ಬೆಲೆ ಕಳೆದ ತಿಂಗಳಿಗಿಂತ ಅಧಿಕ ದರದಲ್ಲಿ ಏರಿಕೆಯಾಗಿದೆ. ಟೊಮ್ಯಾಟೋ ಬೆಲೆ ಮಾತ್ರ ಸ್ಥಿರವಾಗಿದೆ.

ಮಂಡಿಗಳಲ್ಲಿ ಈರುಳ್ಳಿ-ಶುಂಠಿ ಬೆಲೆ ಏರಿಕೆ

ಮಂಡಿ, ದಿನಸಿ ಅಂಗಡಿಗಳಲ್ಲಿ ಟೊಮ್ಯಾಟೋ ಬೆಲೆ 30, ಈರುಳ್ಳಿ ಬೆಲೆ 80ಕ್ಕೆ ಏರಿಕೆಯಾಗಿದೆ. ಇನ್ನೂ ಸೌತೆಕಾಯಿ 48 ರೂಪಾಯಿಯಾಗಿದ್ದು ಕ್ಯಾರೆಟ್​ ಬೆಲೆ 70ಕ್ಕೆ ಮುಟ್ಟಿದೆ. ಆಲೂಗಡ್ಡೆ 50 ರೂಪಾಯಿ, ನುಗ್ಗೆಕಾಯಿ 70, ಮಂಗಳೂರು ಸೌತೆಕಾಯಿ 64 ರೂಪಾಯಿಯಾಗಿದೆ. ಮಂಡಿಗಳಲ್ಲಿ ಶುಂಠಿಯು 240 ರೂಪಾಯಿಗೆ ಮಾರಾಟವಾಗುತ್ತಿದೆ. ಬೆಂಡೆಕಾಯಿ, ಬೀನ್ಸ್​, ನವಿಲು ಕೋಸು ಸೇರಿದಂತೆ ಇತರ ತರಕಾರಿ ದರದಲ್ಲೂ ಏರಿಕೆ ಕಂಡಿದೆ.

ಇದನ್ನೂ ಓದಿ: ಹಣ್ಣು-ತರಕಾರಿಗೂ ತಟ್ಟಿದ ತೈಲ ಬೆಲೆ ಏರಿಕೆ

ಏಕಾಏಕಿ ಬೆಲೆ ಏರಿಕೆಗೆ ಕಾರಣ ಏನು?

ಮಾರಾಟಗಾರರ ಪ್ರಕಾರ, ಬೆಲೆ ಏರಿಕೆಗೆ ಹವಾಮಾನ ವೈಪರೀತ್ಯ ಕಾರಣ. ಒಂದು ಕಡೆ ನಿರಂತರ ಮಳೆ, ಮತ್ತೊಂದು ಕಡೆ ಬರದ ವಾತಾವರಣ. ಹೀಗಾಗಿ ಮಾರುಕಟ್ಟೆಯಲ್ಲಿ ಹಸಿರು ತರಕಾರಿ, ಸೊಪ್ಪುಗಳ ಬೆಲೆಯೂ ಗಣನೀಯವಾಗಿ ಏರಿಕೆಯಾಗುತ್ತಿದೆ. ಮಾರುಕಟ್ಟೆಗಳಿಗೆ ತರಕಾರಿಗಳ ಪೂರೈಕೆ ಕಡಿಮೆಯಾಗುತ್ತಿದೆ ಎನ್ನಲಾಗಿದೆ. ಹಬ್ಬದ ಸಮಯದಲ್ಲಿ ಸಕ್ಕರೆ, ಬೆಲ್ಲ, ತರಕಾರಿ ಬೆಲೆಗಳು ಏರಿಕೆಯಾಗಿರುವುದು ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಎಲ್ಲಿ ಖರೀದಿಸಿಸುವುದು ಸೂಕ್ತ?

ಸಾಮಾನ್ಯವಾಗಿ ತರಕಾರಿ ಖರೀದಿ ನಿಮಗೆ ದುಬಾರಿ ಎನಿಸಿದರೆ ನೀವು ವಾಸ ಮಾಡುವ ಸ್ಥಳದ ಸುತ್ತಮುತ್ತ ಗುಡ್ಡೆ ಇಟ್ಟು ತರಕಾರಿ ಮಾರಾಟ ಮಾಡುವ ಪ್ರದೇವಿದೆಯಾ ಎನ್ನುವುದನ್ನು ಕಂಡುಕೊಳ್ಳಿ. ಹತ್ತು ರೂಪಾಯಿಗೆ ದಿನಕ್ಕೆ ಬೇಕಾದಷ್ಟು ತರಕಾರಿಯನ್ನು ಮಾತ್ರ ನೀವು ಇವರ ಬಳಿ ಖರೀದಿ ಮಾಡಬಹುದಾಗಿದೆ. ಯಾವ ತರಕಾರಿ ಕಡಿಮೆ ಇರುತ್ತದೆಯೋ ಅಂತಹ ತರಕಾರಿಯನ್ನೇ ಖರೀದಿ ಮಾಡಲು ಯತ್ನಿಸಿ. ಮಾರ್ಟ್​ಗಳಲ್ಲಿ ತೆಂಗಿನ ಕಾಯಿ ಹಾಗೂ ಕೆಲವೊಂದು ತರಕಾರಿ ರಿಯಾಯಿತಿ ದರದಲ್ಲಿ ಲಭ್ಯವಿರುತ್ತದೆ. ಇನ್ನೂ ಮಾರುಕಟ್ಟೆಗಳಲ್ಲಿ ಹೋಲ್​ಸೇಲ್​ ಆಗಿ ಖರೀದಿ ಮಾಡಿ, ಅದನ್ನು ಫ್ರಿಡ್ಜ್​ನಲ್ಲಿಟ್ಟು ಬಳಕೆ ಮಾಡಬಹುದು, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net