ಲೋಕಾಯುಕ್ತ ಮರು ಸ್ಥಾಪನೆಯಾಗಿ ಒಂದು ವರ್ಷ

karnataka-lokayukta.jpg
Published on

ಬೆಂಗಳೂರು: ಭ್ರಷ್ಟಚಾರ ನಿಗ್ರಹ ದಳ (ಎಸಿಬಿ) ರದ್ದಾಗಿ ಲೋಕಾಯುಕ್ತ ಮರುಸ್ಥಾಪನೆಯಾಗಿ ಸೆ.9ಕ್ಕೆ ಒಂದು ವರ್ಷವಾಗಿದೆ.
ಎಸಿಬಿಯನ್ನು ರದ್ದುಪಡಿಸಿ ಲೋಕಾಯುಕ್ತವನ್ನು ಮರುಸ್ಥಾಪನೆ ಮಾಡುವಂತೆ ಹೈಕೋರ್ಟ್ ರಾಜ್ಯಸರ್ಕಾರಕ್ಕೆ ಸೂಚಿಸಿತ್ತು. ಹೀಗಾಗಿ ೨೦೨೨ ರ ಸೆ.೯ ರಂದು ಎಸಿಬಿಯನ್ನು ರದ್ದುಪಡಿಸಿದ್ದ ಸರ್ಕಾರ ಲೋಕಾಯುಕ್ತವನ್ನು ಸ್ಥಾಪಿಸಿ ಅಧಿಕೃತ ಆದೇಶ ಹೊರಡಿಸಿತ್ತು. ಆ ನಂತರ ಎಸಿಬಿಯಲ್ಲಿದ್ದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಿತ್ತು.
ಲೋಕಾಯುಕ್ತ ಕಾರ್ಯಾರಂಭದ ಮೊದಲ ದಿನವೇ ಇಬ್ಬರು ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಕೆಡವಿತ್ತು. ನಂತರ ಕೆಎಸ್‌ಡಿಎಲ್ ಸಂಬಂಧಿಸಿದ ಬಿಲ್ ಮೊತ್ತವನ್ನು ಬಿಡುಗಡೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಅಂದಿನ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ಸೇರಿ ಇತರರನ್ನು ಬಂಧಿಸಿ ೬ ಕೋಟಿ ರೂ. ನಗದು ವಶಪಡಿಸಿಕೊಳ್ಳುವ ಮೂಲಕ ಲೋಕಾಯುಕ್ತ ಭರ್ಜರಿ ಭೇಟೆಯಾಡಿತ್ತು. ನಂತರ ಬಿಬಿಎಂಪಿ, ಬಿಡಿಎ, ಆರ್‌ಟಿಒ ಕಚೇರಿಗಳ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿತ್ತು.
ದಾಳಿಯಲ್ಲಿ ಒಟ್ಟು ೮.೧೨ ಕೋಟಿ ನಗದು ಪತ್ತೆಯಾಗಿತ್ತು. ಕ್ರೆಸೆಂಟ್ ರಸ್ತೆಯ ಖಾಸಗಿ ಕಚೇರಿಯಲ್ಲಿ ೨.೦೨ ಕೋಟಿ ರೂ. ನಗದು ಮತ್ತು ಮಾಡಾಳ್ ವಿರೂಪಾಕ್ಷಪ್ಪ ಅವರ ಸಂಜಯ್‌ನಗರದ ಮನೆಯಲ್ಲಿ ೬.೧೦ ಕೋಟಿ ರೂ. ನಗದನ್ನು ವಶಪಡಿಸಿಕೊಳ್ಳಲಾಗಿತ್ತು. ಇದರ ಜತೆಗೆ ಅಪಾರ ಪ್ರಮಾಣದ ಆಸ್ತಿ ಪತ್ರಗಳು, ಲಕ್ಷಾಂತರ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಭರಣ, ಡೈರಿ ಸೇರಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net