500 ರೂ. ಲಂಚಕ್ಕೆ ಒಂದು ವರ್ಷ ಜೈಲು!

5-6853005b1f7fb
Published on

ಬೆಳಗಾವಿ: ಮೂವತ್ತು ವರ್ಷಗಳ ಹಿಂದೆ 500 ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದ ತಾಲೂಕಿನ ಕಡೋಲಿ ಗ್ರಾಮ ಲೆಕ್ಕಾಧಿಕಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ವಿಚಾರಣಾ ನ್ಯಾಯಾಲಯದ ಆದೇಶ ಎತ್ತಿ ಹಿಡಿದಿದೆ. ಈ ಹಿನ್ನೆಲೆಯಲ್ಲಿ ಲೆಕ್ಕಾಧಿಕಾರಿ ಹಿಂಡಲಗಾ ಕಾರಾಗೃಹ ಅತಿಥಿಯಾಗಿದ್ದಾರೆ.

ಅಂದಿನ ಕಡೋಲಿ ಗ್ರಾಮದ ಲೆಕ್ಕಾಧಿಕಾರಿ ನಾಗೇಶ ಶಿವಂಗೇಕರ ಶಿಕ್ಷೆಗೊಳಗಾದವರು. ಕಡೋಲಿ ಗ್ರಾಮದ ಲಕ್ಷ್ಮಣ ಕಟಾಂಬಳೆ ಎಂಬ ಸಹೋದರರ ಜಮೀನು ಪಾಲು ಸಂಬಂಧ ಗೇಣಿ ಮತ್ತು ಪಹಣಿ ಪ್ರತಿಯಲ್ಲಿ ವಾಟ್ನಿ ಮಾಡಿ ಉತಾರ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟು ಸಿಕ್ಕಿ ಬಿದ್ದಿದ್ದರು. ಲೋಕಾ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯ ಲೆಕ್ಕಾಧಿಕಾರಿಗೆ 1 ವರ್ಷ ಕಠಿಣ ಶಿಕ್ಷೆ, 1 ಸಾವಿರ ದಂಡ ವಿಧಿಸಿ ಆದೇಶಿಸಿತ್ತು. ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಲೆಕ್ಕಾಧಿಕಾರಿ ಧಾರವಾಡ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ವೇಳೆ ನ್ಯಾಯಾಲಯವು ಪ್ರಕರಣದಿಂದ ಅಧಿಕಾರಿಯನ್ನು ಬಿಡುಗಡೆಗೊಳಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಲೋಕಾಯುಕ್ತ ಅಧಿಕಾರಿಗಳು ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net