

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಸಾಯಿ ಕೃಷ್ಣನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಫೆ.8 ರಂದು ಬೆಳಿಗ್ಗೆ 9 ಕ್ಕೆ ಹಿರಿಯ ಆಟಗಾರನ್ನೊಳಗೊಂಡ ಭಾರತ ಹಾಗೂ ಶ್ರೀಲಂಕಾ ನಡುವಿನ ಟ್ವಿಂಟಿ 20 ಒನ್ ವರ್ಲ್ಡ್ ಫ್ಯಾಮಿಲಿ ಕಪ್ ಕ್ರಿಕೆಟ್ ಪಂದ್ಯಾವಳಿಯು ನಡೆಯಲಿದೆ.
ಪೋಷಣೆ, ಶಿಕ್ಷಣ ಮತ್ತು ಆರೋಗ್ಯ ಸೇವೆಗಳಿಗಾಗಿ ಸೌಹಾರ್ದತೆಯ ಸಂದೇಶದೊಂದಿಗೆ ಶ್ರೀ ಮಧುಸೂದನ್ ಸಾಯಿ ಗ್ಲೋಬಲ್ ಹ್ಯುಮಾನಿಟೇರಿಯನ್ ಮಿಷನ್ ಕೈಗೊಂಡಿರುವ ಪಂದ್ಯದಲ್ಲಿ ಎರಡೂ ರಾಷ್ಟ್ರಗಳ ಮಾಜಿ ಆಟಗಾರರನ್ನು ಪರಸ್ಪರ ಕಣಕ್ಕಿಳಿಯುತ್ತಿದ್ದಾರೆ.
ಕಳೆದ 2024 ರಲ್ಲಿ ನಡೆದ ಒಂದು ವಿಶ್ವ ಒಂದು ಕುಟುಂಬ ಕಪ್ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ಮಾಂಟಿ ಪನೇಸರ್, ಡ್ಯಾನಿ ಮಾರಿಸನ್, ಅಲೋಕ್ ಕಪಾಲಿ, ಜೇಸನ್ ಕ್ರೆಜಾ, ಮುತ್ತಯ್ಯ ಮುರಳೀಧರನ್ ಮತ್ತು ಮಖಾಯಾ ಎನ್ಟಿನಿ ಸೇರಿದಂತೆ ಏಳು ವಿವಿಧ ದೇಶಗಳ ಆಟಗಾರರು ಪಾಲ್ಗೊಂಡಿದ್ದರು.
ತಂಡಗಳು ಇಂತಿವೆ
ಇಂಡಿಯಾ ಒನ್ ವರ್ಲ್ಡ್: ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ನಮನ್ ಓಜಾ, ಸುಬ್ರಮಣ್ಯಂ ಬದ್ರಿನಾಥ್, ಅಶೋಕ್ ದಿಂಡಾ, ಪಿಯೂಷ್ ಚಾವ್ಲಾ, ಅಭಿಮನ್ಯು ಮಿಥುನ್, ವೆಂಕಟೇಶ್ ಪ್ರಸಾದ್, ಸುನೀಲ್ ಜೋಶಿ, ಪಾರ್ಥಿವ್ ಪಟೇಲ್, ಸುಜಿತ್ ಸೋಮಸುಂದರ್, ಮನೋಜ್ ತಿವಾರಿ, ಸ್ಟುವರ್ಟ್ ಬಿನ್ನಿ, ದೊಡ್ಡ ಗಣೇಶ್.
ಶ್ರೀಲಂಕಾ ಒನ್ ಫ್ಯಾಮಿಲಿ: ಅರವಿಂದ ಡಿ ಸಿಲ್ವಾ, ಮರ್ವನ್ ಅಟಪಟ್ಟು, ಚಮಿಂದ ವಾಸ್, ಉಪುಲ್ ತರಂಗ, ತರಂಗ ಪರಣವಿತಾನ, ಮಿಲಿಂದ ಸಿರಿವರ್ಧನ, ಅಸೆಲಾ ಗುಣರತ್ನೆ, ನುವಾನ್ ಜೋಯ್ಸಾ, ಮುತ್ತಯ್ಯ ಮುರಳೀಧರನ್, ತಿಲನ್ ತುಷಾರ, ರವೀಂದ್ರ ಪುಷ್ಪಕುಮಾರ, ಅಜಂತಾ ಮೆಂಡಿಸ್, ರೊಮೇಶ್ ಕಲುವಿತ್.