ರೈತಸಂಘದ ಜಿಲ್ಲಾಧ್ಯಕ್ಷ ಹಾರಿಸಿದ ಗುಂಡಿನಿಂದ ಒಬ್ಬನಿಗೆ ಗಾಯ; ಆರೋಪಿಯ ಬಂಧನ, ಗಾಯಾಳು ಆಸ್ಪತ್ರೆಗೆ ದಾಖಲು

Bullet
Published on

ಚಿಕ್ಕಮಗಳೂರು: ಜಮೀನು ವಿವಾದದ ಹಿನ್ನೆಲೆಯಲ್ಲಿ ಉಂಟಾದ ಬೆಳವಣಿಗೆಯಲ್ಲಿ ರೈತಸಂಘದ ಜಿಲ್ಲಾಧ್ಯಕ್ಷರೊಬ್ಬರು ಗುಂಡು ಹಾರಿಸಿದ್ದು, ಒಬ್ಬರಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.

ರೈತಸಂಘದ ಜಿಲ್ಲಾಧ್ಯಕ್ಷ ದುಗ್ಗಪ್ಪ ಗೌಡ ಗುಂಡು ಹಾರಿಸಿದವರು. ಇವರು ಹಾಗೂ ಮಂಚೇಗೌಡ ಎಂಬವರ ನಡುವಿನ ಜಮೀನು ವಿವಾದದ ಹಿನ್ನೆಲೆಯಲ್ಲಿ ಈ ಪ್ರಕರಣ ನಡೆದಿದೆ. ಮಂಚೇಗೌಡ ಅವರು ಜಮೀನಿಗೆ ಬೇಲಿ ಹಾಕಿಸಲು ಜೆಸಿಬಿ ಜತೆ ತೆರಳಿದ್ದಾಗ ದುಗ್ಗಪ್ಪ ಗೌಡ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಘರ್ಷ ಉಂಟಾಗಿದ್ದು, ಜಮೀನು ವಿವಾದದ ಪಂಚಾಯ್ತಿಗೆ ತೆರಳಿದ್ದವರ ಮೇಲೆ ದುಗ್ಗಪ್ಪ ಗೌಡ ಅವರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಪರಿಣಾಮವಾಗಿ ಅಣ್ಣು ಎಂಬವರಿಗೆ ಗಾಯವಾಗಿದ್ದು, ಅವರನ್ನು ಮೂಡಿಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಡಿಗೆರೆ ಪೊಲೀಸರು ದುಗ್ಗಪ್ಪ ಗೌಡರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net