ಮೊಬೈಲ್​ ಚಾರ್ಜ್​ ಮಾಡೋ ವಿಚಾರಕ್ಕೆ ಗಲಾಟೆ, ದುರಂತ ಅಂತ್ಯ

murder pic
Published on

ಬೆಂಗಳೂರು: ಮೊಬೈಲ್ ಚಾರ್ಜ್ ಹಾಕುವ ವಿಚಾರಕ್ಕೆ ಮಾಡಿಕೊಂಡ ಸ್ನೇಹಿತರ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ರಾಜಾಜಿನಗರದಲ್ಲಿ ನಡೆದಿದೆ.

ಮಧ್ಯಪ್ರದೇಶ ಮೂಲದ ಇಬ್ಬರು ಯುವಕರು ಕೂಲಿ ಕೆಲಸ ಮಾಡಿಕೊಂಡು ರಾಜಾಜಿನಗರದ ಮನೆಯಲ್ಲಿ ವಾಸವಾಗಿದ್ದರು. ಇಬ್ಬರು ಮೊಬೈಲ್ ಚಾರ್ಜ್ ಹಾಕಲು ಒಂದೇ ಸ್ವಿಚ್ ಬಳಕೆ ಮಾಡುತ್ತಿದ್ದರು. ಈ ವೇಳೆ ನಾನು ಹಾಕುತ್ತೇನೆ ಎಂದು ಇಬ್ಬರ ನಡುವೆ ವಾಗ್ವಾದ ನಡೆದು, ಆರೋಪಿ ಚಾರ್ಜ್​ ಮಾಡುತ್ತಾನೆ.

ಇದಕ್ಕೆ ಮೃತ ಯುವಕ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ. ಕುಪಿತಗೊಂಡ ಆರೋಪಿ, ಮೃತ ಯುವಕನಿಗೆ‌ ಸೌದೆಯಿಂದ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವಗೊಂಡ ಯುವಕನನ್ನು ಆಸ್ಪತ್ರೆಗೆ ಸಾಗಿಸಿದ್ದು, ದಾರಿ ಮಧ್ಯೆ ಸಾವನ್ನಪ್ಪಿದ್ದಾನೆ. ಈ ಸಂಬಂಧ ರಾಜಾಜಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net