ಬಾಕ್ಸ್ ಆಫೀಸ್​ನಲ್ಲಿ 'ಅನಿಮಲ್' ಅಬ್ಬರ ಕುಸಿತ! 18ನೇ ದಿನಕ್ಕೆ ಗಳಿಸಿದ ಒಟ್ಟು ಕಲೆಕ್ಷನ್ ಎಷ್ಟು? ಇಲ್ಲಿದೆ ವಿವರ..

ವಿಜಯವಾಣಿ - 2023-12-19T091259.633
Published on

ಮುಂಬೈ: ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ, ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ನಟಿ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿರುವ 'ಅನಿಮಲ್'​ ಸಿನಿಮಾ ಬಿಡುಗಡೆಗೊಂಡ ಮೊದಲ ದಿನದಂದೇ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡಿತು. ಆರಂಭದಲ್ಲೇ ಬಾಕ್ಸ್​ ಆಫೀಸ್​ನಲ್ಲಿ ಅಬ್ಬರಿಸಿದ ರಣಬೀರ್​ ಚಿತ್ರ, ಇದೀಗ ದಿಢೀರ್​ ಇಳಿಕೆ ಕಂಡಿತ? ಎಂಬ ಪ್ರಶ್ನೆ ಇದೀಗ ಸಿನಿಪ್ರೇಕ್ಷಕರಲ್ಲಿ ಮೂಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ 18ನೇ ದಿನಕ್ಕೆ ಚಿತ್ರ ಒಟ್ಟು ಗಳಿಸಿದ್ದೆಷ್ಟು ಎಂಬುದರ ಮಾಹಿತಿ ಹೀಗಿದೆ ನೋಡಿ.

ಚಿತ್ರಮಂದಿರಗಳಲ್ಲಿ ಮೊದಲ ವಾರ ಉತ್ತಮ ಗಳಿಕೆ ಕಂಡ 'ಅನಿಮಲ್' ತದನಂತರ ಮಂದಗತಿಯಲ್ಲಿ ಸಾಗಿದೆ. ಜಾಗತಿಕವಾಗಿ 17ನೇ ದಿನಕ್ಕೆ ಸಿನಿಮಾ ಒಟ್ಟು 835.9 ಕೋಟಿ ರೂ. ಗಳಿಸಿದ್ದು, ಡಿಸೆಂಬರ್ 18ರ ಸೋಮವಾರದ ಕಲೆಕ್ಷನ್​ನಲ್ಲಿ ಭಾರಿ ಕುಸಿತ ಕಂಡಿದೆ ಎಂದು ಸಿನಿ ಮೂಲಗಳು ತಿಳಿಸಿವೆ. ಇದರ ಬೆನ್ನಲ್ಲೇ ಡಿಸೆಂಬರ್ 21 ಶಾರುಖ್​ ಖಾನ್​ ಅಭಿನಯದ 'ಡಂಕಿ' ಮತ್ತು ಡಿಸೆಂಬರ್ 22 ರಂದು ಪ್ರಭಾಸ್​ ನಟನೆಯ 'ಸಲಾರ್' ಬಹುತೇಕ ಥಿಯೇಟರ್​ಗಳಿಗೆ ಎಂಟ್ರಿ ಕೊಡಲಿದೆ. ಈ ಇಬ್ಬರು ಸ್ಟಾರ್​ ನಟರ ಸಿನಿಮಾಗಳು ಅನಿಮಲ್​ ಚಿತ್ರವನ್ನು ಹಿಂದಿಕ್ಕಲಿದೆ ಎಂಬುದು ಸಿನಿ ಲೆಕ್ಕಾಚಾರಗಳು.

ಡಿಸೆಂಬರ್ 17 ರಂದು ಚಿತ್ರವು ವಿಶ್ವಾದ್ಯಂತ 835.9 ಕೋಟಿ ರೂ.ಗಳನ್ನು ಗಳಿಸಿದೆ ಎಂದು ಚಿತ್ರದ ನಿರ್ಮಾಪಕರು ಮಾಹಿತಿ ನೀಡಿದ್ದಾರೆ. ಭಾರತದಲ್ಲಿ 18 ದಿನಗಳ ಒಟ್ಟು ಕಲೆಕ್ಷನ್ ಈಗ 517.94 ಕೋಟಿ ರೂ. ಇದ್ದು, ಡಿಸೆಂಬರ್ 18 ರಂದು ಚಿತ್ರವು ಭಾರತದಲ್ಲಿ ಶೇಕಡಾ 12.18 ರಷ್ಟು ಆಕ್ಯುಪೆನ್ಸಿಯನ್ನು ಹೊಂದಿತ್ತು ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net