10ರಂದು ಡಾ. ಎಚ್.ಡಿ.ಚಂದ್ರಪ್ಪಗೌಡ ಸಾಹಿತ್ಯ ಸಂಪುಟ ಬಿಡುಗಡೆ

Asha sheshadri
ಪ್ರಗತಿಪರ ರೈತ ಮಹಿಳೆ ಎಚ್.ಸಿ.ಆಶಾ ಶೇಷಾದ್ರಿ ಕನ್ನಂಗಿ
Published on

ಶಿವಮೊಗ್ಗ: ಕನ್ನಡ ಸಾರಸ್ವತ ಲೋಕದಲ್ಲಿ ಹೆಸರು ಮಾಡಿದ ಡಾ. ಎಚ್.ಡಿ.ಚಂದ್ರಪ್ಪಗೌಡರ ಸಾಹಿತ್ಯ ಸಂಪುಟಗಳ ಬಿಡುಗಡೆ ಸಮಾರಂಭ ಮಾ.10ರಂದು ಬೆಳಗ್ಗೆಯಿಂದ ಸಂಜೆಯವರೆಗೆ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಪ್ರಗತಿಪರ ರೈತ ಮಹಿಳೆ ಎಚ್.ಸಿ.ಆಶಾ ಶೇಷಾದ್ರಿ ಕನ್ನಂಗಿ ಹೇಳಿದರು.

ಮಾ. 10ರಂದು ಬೆಳಗ್ಗೆ 10ಕ್ಕೆ ಮನೋವೈದ್ಯ ಡಾ. ಕೆ.ಆರ್.ಶ್ರೀಧರ್ ಕಾರ್ಯಕ್ರಮ ಉದ್ಘಾಟಿಸುವರು. ಹಂಪಿಯ ಕನ್ನಡ ವಿವಿಯ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅಧ್ಯಕ್ಷತೆ ವಹಿಸುವರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಸಿ.ಆರ್.ಚಂದ್ರಶೇಖರ್ ಸಾಹಿತ್ಯ ಸಂಪುಟಗಳ ಬಿಡುಗಡೆ ಮಾಡುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹಂಪಿ ವಿವಿ ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ, ನವ ಕರ್ನಾಟಕ ಪಬ್ಲಿಕೇಷನ್‌ನ ರಮೇಶ್ ಉಡುಪ, ಹಂಪಿ ವಿವಿ ಪ್ರಸಾರಾಂಗ ನಿರ್ದೇಶಕ ಡಾ. ಮಾಧವ ಪೆರಾಜೆ ಮುಖ್ಯ ಅತಿಥಿಗಳಾಗಿರುವರು. ಪ್ರಾಧ್ಯಾಪಕ ಡಾ. ಗುರುದತ್, ಸಾಹಿತ್ಯ ಸಂಪುಟಗಳ ಪರಿಚಯ ಮಾಡಿಕೊಡುವರು. ಮಧ್ಯಾಹ್ನ 2.30ರಿಂದ 5ರವರೆಗೆ ಡಾ. ಎಚ್.ಡಿ.ಚಂದ್ರಪ್ಪಗೌಡ ಅವರ ಸಮಗ್ರ ಸಾಹಿತ್ಯದ ಮರು ಓದು, ಕೃತಿಗಳ ಕುರಿತು ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ. ವಿಜಯಾ ಶ್ರೀಧರ್, ಡಾ. ಜಿ.ಕೆ.ರಮೇಶ್ ಗೌಡರ ಬದುಕು ಬರಹ ಹಾಗೂ ಜೀವನ ಚಿತ್ರ ಕುರಿತು ಮಾತನಾಡುವರು. ಡಾ. ಸಿ.ಜಿ.ಕೇಶವಮೂರ್ತಿ ಅವರ ಒಡನಾಟದ ಬಗ್ಗೆ ಮಾತನಾಡುವರು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್, ಪ್ರಮುಖರಾದ ಎಂ.ಎ.ರಮೇಶ್ ಹೆಗ್ಡೆ, ಎಚ್.ಸಿ.ಮಂಜುನಾಥ್, ಜಿ. ವಿಜಯಕುಮಾರ್, ಶೇಷಾದ್ರಿ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net