ಪ್ರಧಾನಿ ಮೋದಿ ಜತೆಗಿನ ಮೊದಲ ಭೇಟಿಯಲ್ಲೇ ಭಯೋತ್ಪಾದನೆಯಲ್ಲಿ ಪಾಕ್​ ಪಾತ್ರ ಪ್ರಸ್ತಾಪಿಸಿದ ಕಮಲಾ ಹ್ಯಾರಿಸ್​

Modi
Published on

ನವದೆಹಲಿ: ಯುಎಸ್​ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಮೊದಲ ಭೇಟಿಯಲ್ಲೇ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಪಾಕಿಸ್ತಾನ ಕುರಿತು ಚರ್ಚೆ ನಡೆಸಿದ್ದು, ಭಯೋತ್ಪಾದನೆಯಲ್ಲಿ ಪಾಕಿಸ್ತಾನದ ಪಾತ್ರ ಮತ್ತು ಉ್ರಗರ ಬಗ್ಗೆ ಕಠಿಣ ಕ್ರಮದ ತೆಗೆದುಕೊಳ್ಳುವಂತೆ ಸೂಚನೆ ನೀಡಿರುವುದಾಗಿ ಹೇಳಿದ ಕಮಲಾ ಹ್ಯಾರಿಸ್​, ಆಫ್ಘಾನ್​ ಬೆಳವಣಿಗೆ ಭಾರತ ಮತ್ತು ಅಮೆರಿಕ ಮೇಲೆ ಪರಿಣಾಮ ಬೀರುವುದಿಲ್ಲ ಎಂಬ ಭರವಸೆಯನ್ನು ನೀಡಿದ್ದಾರೆ.

ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್​ ಶ್ರಿಂಗ್ಲಾ ಅವರ ಪ್ರಕಾರ ಅನೇಕ ದಶಕಗಳಿಂದ ಭಾರತವು ಭಯೋತ್ಪಾದನೆಯ ಬಲಿಪಶುವಾಗಿದೆ ಎಂಬುದನ್ನು ಕಮಲಾ ಹ್ಯಾರಿಸ್​ ಕೂಡ ಒಪ್ಪಿಕೊಂಡಿದ್ದಾರೆ. ಹೀಗಾಗಿ ಭಯೋತ್ಪಾದನೆಯನ್ನು ಹತೋಟಿಯಲ್ಲಿಡಲು ಉಗ್ರರ ಸಂಘಟನೆಗಳಿಗೆ ಬೆಂಬಲ ನೀಡುವ ಪಾಕ್​ ಮೇಲೆ ಬಹಳ ಹತ್ತಿರದಿಂದ ಮೇಲ್ವಿಚಾರಣೆ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.

ಭಾರತೀಯ ಮೂಲದ ಕಮಲಾ ಹ್ಯಾರಿಸ್‌ನೊಂದಿಗೆ ಪ್ರಧಾನಿ ಮೋದಿ ಅವರು ಶ್ವೇತಭವನದಲ್ಲಿ ಗುರುವಾರ ಭೇಟಿಯಾಗಿ ಒಂದು ಗಂಟೆಗೂ ಅಧಿಕ ಕಾಲ ಚರ್ಚಿಸಿದರು. ಭಾರತ-ಯುಎಸ್ ಕಾರ್ಯತಂತ್ರದ ಪಾಲುದಾರಿಕೆ ಮತ್ತು ಪ್ರಜಾಪ್ರಭುತ್ವ, ಅಫ್ಘಾನಿಸ್ತಾನ ಮತ್ತು ಇಂಡೋ-ಪೆಸಿಫಿಕ್‌ಗೆ ಬೆದರಿಕೆಗಳನ್ನು ಒಳಗೊಂಡಂತೆ ಸಾಮಾನ್ಯ ಹಿತಾಸಕ್ತಿಯ ಜಾಗತಿಕ ಸಮಸ್ಯೆಗಳನ್ನು ಗಟ್ಟಿಗೊಳಿಸುವತ್ತ ಗಮನ ಹರಿಸುವುದರ ಬಗ್ಗೆ ಚರ್ಚೆ ನಡೆಸಿದ್ದಾರೆ.

ಭಯೋತ್ಪಾದನೆ ವಿಷಯ ಬಂದಾಗ ಅದರಲ್ಲಿ ಪಾಕಿಸ್ತಾನದ ಪಾತ್ರದ ಬಗ್ಗೆ ಕಮಲಾ ಹ್ಯಾರಿಸ್ ಮಾತನಾಡಿದ್ದಾರೆ. ಅಲ್ಲದೆ, ಪಾಕಿಸ್ತಾನದಲ್ಲಿ ಉಗ್ರ ಸಂಘಟನೆಗಳು ಕಾರ್ಯನಿರ್ವಹಿಸುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪಾಕ್​ಗೆ ಸೂಚನೆ ನೀಡಿರುವ ಕಮಲಾ ಹ್ಯಾರಿಸ್​, ಯಾವುದೇ ಕಾರಣಕ್ಕೂ ಭಾರತ ಮತ್ತು ಅಮೆರಿಕ ಭದ್ರತೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ. ಗಡಿಯಾಚೆಗಿನ ಭಯೋತ್ಪಾದನೆ ನಡೆಯುತ್ತಿರುವುದನ್ನು ಒಪ್ಪಿಕೊಂಡರು ಮತ್ತು ಭಾರತವು ಹಲವು ದಶಕಗಳಿಂದ ಭಯೋತ್ಪಾದನೆಯ ಬಲಿಪಶುವಾಗಿದೆ ಮತ್ತು ಅದನ್ನು ನಿಯಂತ್ರಿಸುವ ಅಗತ್ಯತೆಯ ಮೇಲೆ ಮತ್ತು ಅಂತಹ ಭಯೋತ್ಪಾದಕ ಗುಂಪುಗಳಿಗೆ ಪಾಕಿಸ್ತಾನದ ಬೆಂಬಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹ್ಯಾರಿಸ್​ ಹೇಳಿದ್ದಾಗಿ ಶ್ರಿಂಗ್ಲಾ ತಿಳಿಸಿದರು.

ಪ್ರಪಂಚದಾದ್ಯಂತದ ಪ್ರಜಾಪ್ರಭುತ್ವಗಳು ಅಪಾಯದಲ್ಲಿದೆ. ನಾವು ನಮ್ಮ ದೇಶಗಳಲ್ಲಿ ಮತ್ತು ಪ್ರಪಂಚದಾದ್ಯಂತ ಪ್ರಜಾಪ್ರಭುತ್ವ ತತ್ವಗಳನ್ನು ಮತ್ತು ಸಂಸ್ಥೆಗಳನ್ನು ರಕ್ಷಿಸುವುದು ಅತ್ಯಗತ್ಯ ಮತ್ತು ಮನೆಯಲ್ಲಿ ಪ್ರಜಾಪ್ರಭುತ್ವಗಳನ್ನು ಬಲಪಡಿಸಲು ನಾವು ಏನು ಮಾಡಬೇಕೆಂದು ನಾವು ನಿರ್ವಹಿಸುತ್ತೇವೆ ಮತ್ತು ನಮ್ಮ ದೇಶಗಳ ಜನರ ಹಿತಾಸಕ್ತಿಗಾಗಿ ಪ್ರಜಾಪ್ರಭುತ್ವಗಳನ್ನು ರಕ್ಷಿಸುವುದು ನಮ್ಮ ರಾಷ್ಟ್ರಗಳ ಮೇಲೆ ಕಡ್ಡಾಯವಾಗಿದೆ ಎಂದು ಕಮಲಾ ಹ್ಯಾರಿಸ್​ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net