ಜ.1ಕ್ಕೆ ರಾಮೇಶ್ವರ ದೇವರ ತೆಪ್ಪೋತ್ಸವ

rameshwara temple
ಶ್ರೀ ರಾಮೇಶ್ವರ ದೇವಾಲಯ
Published on

ತೀರ್ಥಹಳ್ಳಿ: ಎಳ್ಳಮಾವಾಸ್ಯೆ ಜಾತ್ರಾ ಮಹೋತ್ಸವದ ಅಂಗವಾಗಿ ಹೊಸವರ್ಷದ ಮೊದಲ ದಿನವಾದ ಜ.1ರಂದು ಸಂಜೆ ತುಂಗಾ ನದಿ ದಡದಲ್ಲಿ ಅದ್ದೂರಿ ತೆಪ್ಪೋತ್ಸವ ನೆರವೇರಲಿದೆ ಎಂದು ಸಮಿತಿ ಸಂಚಾಲಕರಾದ ಸೊಪ್ಪುಗುಡ್ಡೆ ರಾಘವೇಂದ್ರ ಮತ್ತು ಟಿ.ಎಲ್.ಸುಂದರೇಶ್ ಹೇಳಿದರು.

30ರಂದು ತುಂಗಾ ನದಿಯ ರಾಮಕೊಂಡದಲ್ಲಿ ತೀರ್ಥಸ್ನಾನ, 31ಕ್ಕೆ ಶ್ರೀ ರಾಮೇಶ್ವರ ದೇವರ ರಥೋತ್ಸವ ಜರುಗಲಿದೆ. 17 ಲಕ್ಷ ರೂ. ವೆಚ್ಚದಲ್ಲಿ ಕಾರ್ಯಕ್ರಮ ರೂಪಿಸಲಾಗಿದ್ದು, ನದಿಯ ಇಕ್ಕೆಲಗಳಲ್ಲಿ ಮತ್ತು ತೂಗು ಸೇತುವೆಗೆ ವಿದ್ಯುತ್ ದೀಪಾಲಂಕಾರ ಮಾಡಲಾಗುವುದು. ಸಿಡಿಮದ್ದು ಪ್ರದರ್ಶನಕ್ಕೆ ಆದ್ಯತೆ ನೀಡಲಾಗಿದ್ದು, ಈ ಬಾರಿ 6 ಲಕ್ಷ ರೂ. ವೆಚ್ಚದಲ್ಲಿ ಸಿಡಿಮದ್ದು ತಯಾರಿಕೆಯನ್ನು ನಾಡಿನ ಇಬ್ಬರು ಖ್ಯಾತ ತಯಾರಕರಿಗೆ ಗುತ್ತಿಗೆ ನೀಡಲಾಗಿದೆ. ತೆಪ್ಪೋತ್ಸವದ ಪೂರ್ಣ ವೆಚ್ಚವನ್ನು ಎಂದಿನಂತೆ ದಾನಿಗಳ ನೆರವಿನಿಂದಲೇ ನಿರ್ವಹಿಸಲಾಗುತ್ತಿದೆ ಎಂದು ಬುಧವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಾತ್ರೆ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಡಿ.30ರಂದು ಸಂಜೆ ತುಂಗಾ ನದಿ ದಡದಲ್ಲಿ ಖ್ಯಾತ ಗಾಯಕಿ ಶಮಿತಾ ಮಲ್ನಾಡ್ ತಂಡದವರಿಂದ ಸಂಗೀತ ಮತ್ತು ನೃತ್ಯ, ಜ.1ರಂದು ಸಂಜೆ ಖ್ಯಾತ ಒಡಿಸ್ಸಿ ನೃತ್ಯ ಕಲಾವಿದ ಉದಯಕುಮಾರ್ ಶೆಟ್ಟಿ ತಂಡದವರಿಂದ ನೃತ್ಯ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.

ತೆಪ್ಪೋತ್ಸವ ಸಮಿತಿ ಗೌರವಾಧ್ಯಕ್ಷ ಎಚ್.ಪಾಂಡುರಂಗಪ್ಪ, ಆರ್ಥಿಕ ಸಮಿತಿ ಸಂಚಾಲಕ ಸಂದೇಶ್ ಜವಳಿ, ಪ್ರಚಾರ ಸಮಿತಿಯ ಅನಿಲ್, ಶ್ರೀಕಾಂತ ನಾಯಕ್, ಸಮಿತಿ ಸದಸ್ಯರಾದ ರತ್ನಾಕರ ಶೆಟ್ಟಿ, ಸಂಜಯ್, ಅಶೋಕ ಶೆಟ್ಟಿ, ಶ್ರೀನಿವಾಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net