ಓಂಕಾರಪ್ಪ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ

KDR PIKARD BANK
ಕಡೂರು ಪಟ್ಟಣದ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾದ ಎಸ್. ಓಂಕಾರಪ್ಪ ಅವರ‌್ನು ಬ್ಯಾಂಕಿನ ನಿರ್ದೇಶಕರು ಸನ್ಮಾನಿಸಿದರು. ಕೆ.ಎಚ್.ರಂಗನಾಥ್, ನಟರಾಜ್, ಎಚ್.ಎಂ.ರೇವಣ್ಣಯ್ಯ, ಪುಷ್ಪಲತಾ ಸೋಮೇಶ್ ಇತರರಿದ್ದರು.
Published on

ಕಡೂರು: ಪಟ್ಟಣದ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರಾಗಿ ಚಿಕ್ಕಬಾಣೂರು ಎಸ್.ಓಂಕಾರಪ್ಪ ಸೋಮವಾರ ಅವಿರೋಧವಾಗಿ ಆಯ್ಕೆಯಾದರು. ಈ ಹಿಂದೆ ಅಧ್ಯಕ್ಷರಾಗಿದ್ದ ನಟರಾಜ್ ರಾಜೀನಾಮೆಯಿಂದ ಸ್ಥಾನ ತೆರವುಗೊಂಡಿತ್ತು. ಸಹಕಾರ ಸಂಘದ ಅಭಿವೃದ್ಧಿ ಅಧಿಕಾರಿ ಅನುಪಮಾ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಎಸ್.ಓಂಕಾರಪ್ಪ ಮಾತನಾಡಿ, ಆಡಳಿತ ಮಂಡಳಿ ನಿರ್ದೇಶಕರ ಸಹಕಾರದಿಂದ ಅವಿರೋಧ ಆಯ್ಕೆ ಪ್ರಕ್ರಿಯೆ ನಡೆದಿದೆ. ಬ್ಯಾಂಕಿನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು. ಉಪಾಧ್ಯಕ್ಷ ತಿಮ್ಮೇಗೌಡ, ನಿರ್ದೇಶಕರಾದ ಕೆ.ಎಚ್.ರಂಗನಾಥ್, ಎಚ್.ಎಂ.ರೇವಣ್ಣಯ್ಯ, ಎಸ್.ವಿರುಪಾಕ್ಷಪ್ಪ, ಕಲ್ಲೇಶಪ್ಪ, ನಂಜುಂಡಪ್ಪ, ಯತೀಶ್, ಮೋಹನ್ ನಾಯ್ಕ, ಟಿ.ಶಂಕರಪ್ಪ, ಆರ್.ಶ್ರೀನಿವಾಸಮೂರ್ತಿ, ರೇಣುಕಮ್ಮ, ಕೆ.ಕೆ.ಪುಪ್ಪಾಲತಾ ಸೋಮೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಶೆಟ್ಟಿಹಳ್ಳಿ ರಾಮಪ್ಪ, ಮುಖಂಡರಾದ ಎಸ್.ಮಲ್ಲೇಗೌಡ, ಜಿ.ಎನ್.ಪ್ರಕಾಶ್, ಸೋಮಶೇಖರ್, ಜಯಣ್ಣ, ನಂಜುಂಡಪ್ಪ, ಚನ್ನಬಸಪ್ಪ, ಮಂಜನಾಯ್ಕ, ವಕೀಲ ಎಸ್.ಎನ್.ಸುಮುಖ್, ಎಚ್.ಬಿ.ವರುಣ್, ಬ್ಯಾಂಕ್ ವ್ಯವಸ್ಥಾಪಕ ಹನುಮಂತರಾಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net