ಒಮಿಕ್ರಾನ್​ಗೇ​ ಮುಗಿಯಲ್ಲ; ಭವಿಷ್ಯದಲ್ಲಿ ಮತ್ತಷ್ಟು ರೂಪಾಂತರಿಗಳ ಸಾಧ್ಯತೆ!

omicron
ಸಾಂದರ್ಭಿಕ ಚಿತ್ರ
Published on

ನವದೆಹಲಿ: ಒಂದೆಡೆ ಕರೊನಾ ಸೋಂಕು ಹಿಡಿತಕ್ಕೆ ಸಿಗದ ರೀತಿಯಲ್ಲಿ ವ್ಯಾಪಿಸುತ್ತಿದ್ದರೆ ಮತ್ತೊಂದೆಡೆ ಇನ್ನೊಂದು ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ಅದೇನೆಂದರೆ, ಭವಿಷ್ಯದಲ್ಲಿ ಮತ್ತಷ್ಟು ರೂಪಾಂತರಗೊಂಡ ವೈರಸ್​ ಕಾಡುವ ಸಾಧ್ಯತೆ ಇದೆಯಂತೆ.

ಕೋವಿಡ್​-19 ವೈರಸ್​ ರೂಪಾಂತರಗೊಳ್ಳುತ್ತ ಬಂದಿದ್ದು, ಅದೀಗ ಸದ್ಯಕ್ಕೆ ಒಮಿಕ್ರಾನ್​ ವರೆಗೆ ಬಂದು ತಲುಪಿದೆ. ಆದರೆ ಈ ರೂಪಾಂತರ ಇಲ್ಲಿಗೇ ಮುಗಿಯುವುದಿಲ್ಲ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆಯು ಹೇಳಿದೆ.

ಒಮಿಕ್ರಾನ್​ಗೇ ಕೋವಿಡ್ ಕಾಟ ಮುಗಿಯುವುದಿಲ್ಲ. ಏಕೆಂದರೆ ಒಮಿಕ್ರಾನ್​ ರೂಪಾಂತರ ಕೊನೆಯದಲ್ಲ. ಭವಿಷ್ಯದಲ್ಲಿ ಮತ್ತಷ್ಟು ರೂಪಾಂತರಗೊಂಡ ವೈರಸ್​ಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ತಂಡದ ಮರಿಯಾ ವಾನ್​ ಕೆರ್ಖೊವ್ ಅಭಿಪ್ರಾಯಪಟ್ಟಿದ್ದಾರೆ. -ಏಜೆನ್ಸೀಸ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net