

ಶ್ರೀನಗರ: ಮೇಲಿರುವ ಫೋಟೋದಲ್ಲಿರುವ ಬಾಲಕನಿಗೆ ಇದೀಗ 51 ವರ್ಷ ವಯಸ್ಸು. ಭಾರತದ ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿ, ಇದೀಗ ಒಂದು ಪಕ್ಷದ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಯಾರವರು ಎನ್ನುವುದನ್ನು ನೀವೇನಾದರೂ ಕಂಡುಹಿಡಿಯಲು ಸಾಧ್ಯವೇ?
ಆ ಫೋಟೋದಲ್ಲಿರುವವರು ಬೇರಾರಲ್ಲ, ನಮ್ಮ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ. ಅವರ ಈ ಫೋಟೋವನ್ನು ತಂಗಿ ಸಾಫಿಯಾ ಅಬ್ದುಲ್ಲಾ ಖಾನ್ ಹಂಚಿಕೊಂಡಿದ್ದಾರೆ. ಇಂದು ಓಮರ್ ಅವರ 51ನೇ ಜನ್ಮ ದಿನಾಚರಣೆಯಿದ್ದು, ಅದರ ಪ್ರಯುಕ್ತ ಸಾಫಿಯಾ ಹಳೆಯ ನೆನಪನ್ನು ಹಂಚಿಕೊಂಡಿದ್ದಾರೆ.
ಈ ಫೋಟೋ ಅವರ ಕುಟುಂಬ ಇಂಗ್ಲೆಂಡ್ನಲ್ಲಿ ಇದ್ದಾಗ ತೆಗೆದಿದ್ದು ಎಂದು ಸಾಫಿಯಾ ಮಾಹಿತಿ ಹಂಚಿಕೊಂಡಿದ್ದಾರೆ. ಬಾಲ್ಯದಲ್ಲಿ ನನ್ನೊಂದಿಗೆ ಕುಸ್ತಿ ಆಡುತ್ತಿದ್ದ ಪ್ರೀತಿಯ ಅಣ್ಣನಿಗೆ ಜನ್ಮದಿನದ ಶುಭಾಶಯಗಳು ಎಂದು ಅವರು ಅಣ್ಣನಿಗೆ ಶುಭ ಹಾರೈಸಿದ್ದಾರೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ