

ರಾಣೆಬೆನ್ನೂರ: ಪ್ರಸ್ತುತ ದಿನಗಳಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಹಲವಾರು ಬದಲಾವಣೆ ಕಂಡಿದ್ದು, ವಿದ್ಯಾಥಿರ್ಗಳು ನಿತ್ಯವೂ ಆಗು&ಹೋಗುಗಳ ಕುರಿತು ಅರಿತುಕೊಂಡು ತಮ್ಮಲ್ಲಿ ಸಾಮಾನ್ಯಜ್ಞಾನ ಭಂಡಾರ ರೂಪಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ನಗರದ ಓಂ ಪಬ್ಲಿಕ್ ಶಾಲೆಯಲ್ಲಿ ಪಿಕೆಕೆ ಇನಿಷಿಯೇಟಿವ್ ಸಂಸ್ಥೆಯ ವತಿಯಿಂದ ಸೋಮವಾರ ವಿಜ್ಞಾನ ವಿದ್ಯಾಥಿರ್ಗಳಿಗೆ ಇಸ್ರೋ ವಿಜ್ಞಾನಿ ಮಲ್ಲಿಕಾರ್ಜುನ ಅವರಿಂದ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ರಾಣೆಬೆನ್ನೂರಿನಲ್ಲಿ ಶಾಸಕರು ಶೈಕ್ಷಣಿಕ ಹಾಗೂ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುವ ಜೊತೆಗೆ ವಿದ್ಯಾಥಿರ್ಗಳ ಅನುಕೂಲಕ್ಕಾಗಿ ಸೈನ್ಸ್ ಪಾರ್ಕ ನಿಮಾರ್ಣ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಎಸ್ಪಿ ಯಶೋಧಾ ವಂಟಗೋಡಿ ಮಾತನಾಡಿ, ಇಸ್ರೋ ಸಾಧನೆ ಕೇಳಿದರೆ ರೋಮಾಂಚನವಾಗುತ್ತದೆ. ಅಂತಹ ಸಾಧನೆ ಮಾಡಿರುವ ವಿಜ್ಞಾನಿ ನಮ್ಮ ಮುಂದೆ ಇರುವುದು ಸಂತಸವಾಗಿದೆ. ಎಲ್ಲರೂ ವಿಜ್ಞಾನಿಯಾಗಲು ಸಾಧ್ಯವಿಲ್ಲ. ಆದರೆ ನಾವು ಆಯ್ಕೆಮಾಡಿಕೊಂಡ ಕ್ಷೇತ್ರದಲ್ಲಿ ಯಾವ ದಾರಿ ಹಿಡಿಯಬೇಕು ಎಂಬುದನ್ನು ಅರಿತುಕೊಳ್ಳಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ನಾವು ಚಿಕ್ಕವಯಸ್ಸಿನಲ್ಲಿ ವಿಜ್ಞಾನ ಓದುವಾಗ ಕಂಠಪಾಠ ಮಾಡುವುದು ಅನಿವಾರ್ಯವಾಗಿತ್ತು. ಆದರೆ ಇಂದು ಪ್ರಾಯೋಗಿಕ ಕಲಿಕೆಯೊಂದಿಗೆ ಅಧ್ಯಯನ ಮಾಡಬೇಕಾಗಿದೆ. ಚಿಕ್ಕವಯಸ್ಸಿನಲ್ಲಿ ಬುನಾದಿ ಗಟ್ಟಿಯಾದರೆ ಭವಿಷ್ಯದಲ್ಲಿ ಸ್ವಾವಲಂಭಿಯಾಗಲು ಸಾಧ್ಯವಿದೆ. ತಂತ್ರಜ್ಞಾನದ ಜೊತೆಗೆ ಕೌಶಲ್ಯಗಳನ್ನು ಬೆಳಸಿಕೊಂಡು ಮುನ್ನಡೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.
ಓಂ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ರುಕ್ಮಿಣಿ ಸಾವಕಾರ ಅಧ್ಯಕ್ಷತೆ ವಹಿಸಿದ್ದರು. ಇಸ್ರೋ ಸಾಧನೆ ಕುರಿತು ಇಸ್ರೋ ವಿಜ್ಞಾನಿ ಮಲ್ಲಿಕಾರ್ಜುನ ಉಪನ್ಯಾಸ ನೀಡಿದರು.
ಸಂಸ್ಥೆಯ ಕಾರ್ಯದಶಿರ್ ಡಾ. ಮನೋಜ ಸಾವಕಾರ, ಪ್ರಮುಖರಾದ ಶಿಲ್ಪಾ ಸಾವಕಾರ, ಲತಾ ನಿಟ್ಟೂರ, ಪುಟ್ಟಪ್ಪ ಮರಿಯಮ್ಮನವರ ಮತ್ತಿತರರು ಉಪಸ್ಥಿತರಿದ್ದರು.