ಹಳೆ ಟಿವಿ, ಕಂಪ್ಯೂಟರ್, ಮೊಬೈಲ್, ಚಾರ್ಜರ್‌ಗಳಿಗೂ ಕನಿಷ್ಟ ಬೆಲೆ!

Ishwar Khandre
Published on

ಬೆಂಗಳೂರು: ಹಳೆ ಟಿವಿ, ಕಂಪ್ಯೂಟರ್, ಮೊಬೈಲ್, ಚಾರ್ಜ್‌ರ್‌ಗಳಿಗೂ ಮಾರಾಟಗಾರರು ಕನಿಷ್ಟ ಬೆಲೆ ನೀಡಿ ಮರು ಖರೀದಿ ಮಾಡುವ ನಿಯಮ ಜಾರಿಗೆ ತರಲು ಸರ್ಕಾರ ಮುಂದಾಗಿದೆ!

ಹೌದು, ದಿನದಿಂದ ದಿನಕ್ಕೆ ಮನೆಗಳಲ್ಳು ಅಪಾಯಕಾರಿ ಇ-ತ್ಯಾಜ್ಯ ಹೆಚ್ಚಳ ಆಗುತ್ತಿರುವುದು ಮತ್ತು ಗುಜರಿ ಅಂಗಡಿಗಳಲ್ಲಿ ವಿದ್ಯುನ್ಮಾನ ಉಪಕರಣಗಳ ವಸ್ತು ಮಾತ್ರ ತೆಗೆದು ಕೊಂಡು ಉಳಿದ ವಸ್ತುಗಳನ್ನು ವೈಜ್ಞಾನಿಕವಾಗಿ ಸಂಸ್ಕರಿಸದೇ ಇರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕುರಿತು ಆಲೋಚನೆ ನಡೆಸಿದೆ.

ಸಾರ್ವಜನಿಕ ಹಾಗೂ ಸಮುದಾಯದ ಆರೋಗ್ಯ ರಕ್ಷಣೆ ಹಿನ್ನೆಲೆಯಲ್ಲಿ ಇ-ತ್ಯಾಜ್ಯ ವೈಜ್ಞಾನಿಕ ವಿಲೇವಾರಿ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಹೊಸ ಟಿವಿ, ಕಂಪ್ಯುಟರ್, ಮೊಬೈಲ್ ಇತ್ಯಾದಿ ವಿದ್ಯುನ್ಮಾನ ಉಪಕರಣ ಖರೀದಿಸುವ ಸಂದರ್ಭದಲ್ಲಿ ಗ್ರಾಹಕರು ಇಚ್ಚಿಸಿದಲ್ಲಿ ಅವರ ಹಳೆಯ ಟಿವಿ, ಕಂಪ್ಯೂಟರ್, ಮೊಬೈಲ್ ಮತ್ತು ಚಾರ್ಜರ್ ಇತ್ಯಾದಿಗಳನ್ನು ಕಡ್ಡಾಯವಾಗಿ ಮಾರಾಟಗಾರರು ಕನಿಷ್ಟ ಬೆಲೆ ನೀಡಿ ಮರು ಖರೀದಿ ಮಾಡಬೇಕು ಎಂಬ ನಿಯಮ ಜಾರಿಗೆ ತಂದರೆ ಇ-ತ್ಯಾಜ್ಯವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂಬ ಅಭಿಪ್ರಾಯವನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕಂಪ್ಯೂಟರ್ ಮೊಬೈಲ್ ದತ್ತಾಂಶ ದುರ್ಬಳಕೆ ಆಗದ ರೀತಿಯಲ್ಲಿ ಹಳೆಯ ವಿದ್ಯುನ್ಮಾನ ಸಲಕರಣೆಗಳ ಮರು ಖರೀದಿಯ ಸಾಧಕ-ಬಾಧಕ ಮತ್ತು ಅನುಷ್ಠಾನದ ಕುರಿತು 30 ದಿನಗಳಲ್ಲಿ ಪ್ರಸ್ತಾವನೆ ಸಲ್ಲಿಸುವಂತೆ ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಈಶ್ವರ ಖಂಡ್ರೆ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net