

ನವದೆಹಲಿ: ಅದೃಷ್ಟ ಯಾವಾಗ ಯಾರ ಮನೆ ಬಾಗಿಲು ತಟ್ಟುತ್ತದೆ ಎಂದು ಹೇಳುವುದು ಕಷ್ಟ. ಕೆಲವೊಮ್ಮೆ ಅದೃಷ್ಟವು ನಿಮ್ಮ ಪರವಾಗಿ ಇರುತ್ತದೆ ಎನ್ನುವುದಕ್ಕೆ ಸಾಕ್ಷಿ ಎನ್ನುವಂತೆ ಘಟನೆಯೊಂದು ನಡೆದಿದೆ. ಮೂರು ವಿದ್ಯಾರ್ಥಿಗಳು ( Students ) ಸೇರಿ ಬಾಡಿಗೆ ಮನೆಗಾಗಿ ಖರೀದಿಸಿದ ಹಳೆಯ ಸೋಫಾ ( Old Sofa ) ಅವರನ್ನು ಲಕ್ಷಾಧಿಪತಿಗಳನ್ನಾಗಿ ಮಾಡಿತು. ಮೂವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ತಮಗೆ ಒದಗಿ ಬಂದ ಅದೃಷ್ಟವನ್ನು ವಿವರಿಸಿದ್ದಾರೆ. ಇದೀಗ ಪೋಸ್ಟ್ ವೈರಲ್ ಆಗುತ್ತಿದೆ.
ನ್ಯೂಯಾರ್ಕ್‌ನಲ್ಲಿ ( New York ) ಓದುತ್ತಿರುವ ಮೂವರು ವಿದ್ಯಾರ್ಥಿಗಳು ಒಟ್ಟಿಗೆ ವಾಸಿಸಲು ಹೊಸ ಬಾಡಿಗೆ ಮನೆಯೊಂದನ್ನು ನೋಡಿದ್ದಾರೆ. ಮೂವರೂ ಸೇರಿ ಹೊಸ ಮನೆಗೆ ಬೇಕಾದ ಅನೇಕ ವಸ್ತುಗಳನ್ನು ಖರೀದಿಸಿದರು. ಹೆಚ್ಚಿನ ವಸ್ತುಗಳು ಸೆಕೆಂಡ್ ಹ್ಯಾಂಡ್ ಆಗಿದ್ದವು. ಕೊನೆಗೆ ಸೆಕೆಂಡ್ ಹ್ಯಾಂಡ್ ಸೋಫಾ ಖರೀದಿಸಲು ನಿರ್ಧರಿಸಿದ್ದಾರೆ. ಕಡಿಮೆ ಬೆಲೆಯ ಸೆಕೆಂಡ್ ಹ್ಯಾಂಡ್ ಸೋಫಾ ( Old Sofa ) ಹುಡುಕುತ್ತಿದ್ದಾಗ.. ಕೊನೆಗೆ 1300 ರೂ.ಗೆ ಹಳೆಯ ಸೋಫಾ ಇವರ ಕಣ್ಣಿಗೆ ಬಿದ್ದಿದೆ. ಸೋಫಾವನ್ನು ಖರೀದಿಸಿ ಮನೆಗೆ ತಂದ ಒಂದು ದಿನದ ನಂತರ.. ಮೂವರು ಗೆಳೆಯರು ಆರಾಮವಾಗಿ ಒಟ್ಟಿಗೆ ಕುಳಿತು ಹರಟೆ ಹೊಡೆಯುತ್ತಿದ್ದರು. ಸೋಫಾದ ಆರ್ಮ್ ರೆಸ್ಟ್ ಮೇಲೆ ಕೈಗೆ ಏನೋ ಬಡಿದ ಅನುಭವವಾಯಿತು. ಏನಿರಬಹದು ಎಂದು ಹುಡುಕಾಡಿದಾಗ ಒಂದು ಕಲವರ್ ಸಿಕ್ಕಿದೆ.
ಮಂಚದ ಮೇಲೆ ಸಿಕ್ಕ ಕವರ್‌ನಲ್ಲಿ ಏನಿದೆ ಎಂದು ನೋಡಿದಾಗ ಮೂವರು ಬೆಚ್ಚಿಬಿದ್ದರು. ಈ ಕವರ್ನಲ್ಲಿರುವ ನೋಟುಗಳ ಬಂಡಲ್ಗಳನ್ನು ನೋಡಿ ಮೂವರು ಸಖತ್ ಖುಷಿಪಟ್ಟರು. 34 ಲಕ್ಷ ರೂ. ಹಣ ಈ ಬ್ಯಾಗ್ನಲ್ಲಿ ಇತ್ತು. ಆದರೆ ಈ ಹಣದ ಜೊತೆಗೆ ಒಂದು ಲಕೋಟೆಯೂ ಇತ್ತು. ಹಣದ ಮೇಲೆ 91 ವರ್ಷದ ವಿಧವೆಯ ಹೆಸರು ಮತ್ತು ವಿಳಾಸವನ್ನು ಬರೆಯಲಾಗಿತ್ತು. ಅದನ್ನು ನೋಡಿ ಮೂವರೂ ಪೇಪರ್ ನಲ್ಲಿ ವಿಳಾಸ ಹುಡುಕುತ್ತಾ ಹೋದರು. ಸಂಬಂಧಪಟ್ಟ ಮಹಿಳೆಯನ್ನು ಗುರುತಿಸಿ ರೂ. 34 ಲಕ್ಷವನ್ನು ಆಕೆಗೆ ಹಿಂತಿರುಗಿಸಲಾಯಿತು.
ಸುಮಾರು ಮೂವತ್ತು ವರ್ಷಗಳಿಂದ ಸೋಫಾದ ಒಳಗೆ ಹಣ ಇರುವುದನ್ನು ತಿಳಿದು ಅವಳಿಗೂ ಆಶ್ಚರ್ಯವಾಯಿತು. ಕಳೆದು ಹೋದ ಹಣ ವಾಪಸ್ ಬಂದಿದ್ದಕ್ಕೆ ವೃದ್ಧೆ ಸಂತಸಪಟ್ಟರು. ಇವರ ಪ್ರಾಮಾಣಿಕತೆ ಮೆಚ್ಚಿ ಸುಮಾರು 83,900 ರೂ. ಬಹುಮಾನವಾಗಿ ಸ್ನೇಹಿತರಿಗೆ ನೀಡಿದ್ದಾಳೆ.