

Honeymoon: ನನ್ನ ವಯಸ್ಸಿಗೆ ತಕ್ಕಂತೆ ಒಬ್ಬಳು ಸುಂದರವಾದ, ಒಳ್ಳೆಯ ಗುಣವುಳ್ಳ ಹೆಣ್ಣು ಸಿಕ್ಕರೆ ಸಾಕಪ್ಪ ಎಂದು ಕಂಡ ಕಂಡ ದೇವರಿಗೆಲ್ಲ ಹರಕೆ ಕಟ್ಟಿ, ಪೂಜೆ ಸಲ್ಲಿಸುವ ಅದೆಷ್ಟೋ ನವಯುವಕರಿಗೆ ಈ ಸುದ್ದಿ ನಿಜಕ್ಕೂ ಆಘಾತ ತರಿಸುತ್ತದೆ ಎಂಬುದರಲ್ಲಿ ಅನುಮಾನವೇ ಬೇಡ.
ಒಂದಷ್ಟು ವರ್ಷಗಳ ಕಾಲ ಏಕಾಂತದ ಜೀವನ ಸಾಗಿಸಿದ ವೃದ್ಧ ಸಂಗ್ರರಾಮ್ (75), ತನಗಿಂತ ಅರ್ಧ ವಯಸ್ಸು ಕಡಿಮೆಯಿರುವ ಸುಂದರವಾದ ಮಹಿಳೆಯನ್ನು ಇತ್ತೀಚೆಗಷ್ಟೇ ಮದುವೆಯಾಗಿದ್ದರು. ಅದ್ಧೂರಿ ವಿವಾಹ ಸಂಭ್ರಮದ ಬಳಿಕ ಇನ್ನೇನು ಮೊದಲ ರಾತ್ರಿಗೆ ಸಿದ್ಧವಾಗವೇಕು ಎನ್ನುವಷ್ಟರಲ್ಲಿ ಉಸಿರು ಚೆಲ್ಲಿದ್ದು ನಿಜಕ್ಕೂ ದುರಂತವೇ ಸರಿ.
ಘಟನೆ ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯ ಕುಚ್‌ಮುಚ್ ಗ್ರಾಮದಲ್ಲಿ ವರದಿಯಾಗಿದೆ. ಮೊದಲ ಪತ್ನಿಯನ್ನು ಕಳೆದುಕೊಂಡು, ಏಕಾಂತ ಜೀವನ ನಡೆಸುತ್ತಿದ್ದ ವೃದ್ಧನಿಗೆ ಮಕ್ಕಳಿರಲಿಲ್ಲ. ಈ ವಿಚಾರದಲ್ಲಿ ಸಂಬಂಧಿಕರು ಆತನಿಗೆ ಇನ್ನೊಂದು ಮದುವೆಯಾಗುವಂತೆ ಒತ್ತಾಯಿಸಿದ್ದರು. ಅಂತೆಯೇ, ಮರು ಮದುವೆಗೆ ಒಪ್ಪಿಕೊಂಡ ಸಂಗ್ರರಾಮ್, ಸೋಮವಾರ (ಸೆ.29), ಜಲಾಲ್‌ಪುರ ನಿವಾಸಿ ಮನ್ಭವತಿ (35) ಎಂಬ ಮಹಿಳೆಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಮದುವೆ ಮುಗಿಸಿಕೊಂಡು ಮೊದಲ ರಾತ್ರಿಗೆ ಹೋದ ವೃದ್ಧನಿಗೆ ಹಠಾತ್ ಆರೋಗ್ಯ ಹದಗೆಟ್ಟಿತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಸಂಗ್ರರಾಮ್ ದಾರಿ ಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಈ ವಿಚಾರಕ್ಕೆ ಅಚ್ಚರಿ ವ್ಯಕ್ತಪಡಿಸಿರುವ ಗ್ರಾಮಸ್ಥರು, ಇದೊಂದು ಅನುಮಾನಾಸ್ಪದ ಸಾವು ಎಂದಿದ್ದಾರೆ,(ಏಜೆನ್ಸೀಸ್).