ಬಾಲಕಿ ಎದುರು ಅಸಭ್ಯವಾಗಿ ವರ್ತಿಸಿದ ಓಲಾ ಕ್ಯಾಬ್​ ಚಾಲಕ ಮೇ 30ರವರೆಗೆ ಪೊಲೀಸ್​ ವಶಕ್ಕೆ

Ola cab
Published on

ಮುಂಬೈ: ಹದಿನೈದು ವರ್ಷದ ಬಾಲಕಿ ಎದುರು ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಓಲಾ ಕಾರು ಚಾಲಕನನ್ನು ಮೇ 30 ರವರೆಗೆ ಪೊಲೀಸ್​ ವಶಕ್ಕೆ ಒಪ್ಪಿಸಲಾಗಿದೆ.

ಕ್ಯಾಬ್​​ ಚಾಲಕನ ವಿರುದ್ಧ ಮೇ 25 ರಂದು ಆರೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ವಿರುದ್ಧ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಸಬ್​​ಇನ್ಸ್​ಪೆಕ್ಟರ್​​ ಸಚಿನ್​ ಪಾಂಚಾಲ್​​ ತಿಳಿಸಿದ್ದಾರೆ.

ಬಿಹಾರದ ಮೂಲದ 29 ವರ್ಷದ ಮುರಾರ ಕುಮಾರ್​ ಸಿಂಗ್​ ಗುರುಗಾಂವ್​​ನಲ್ಲಿ ಓಲಾ ಕಾರು ಚಾಲಾಯಿಸುತ್ತಿದ್ದ, ವಿದ್ಯಾಭ್ಯಾಸದ ನಿಮಿತ್ತ ಗುರಗಾಂವ್​ಗೆ ಬಾಲಕಿ ತೆರಳಿದ್ದಳು. ಈ ವೇಳೆ ಓಲಾ ಕ್ಯಾಬ್​​ನಲ್ಲಿ ಸಂಚರಿಸಿದ್ದಾಳೆ.ಇದೇ ಸಂದರ್ಭ ನೋಡಿ, ಈ ಚಾಲಕ ಬಾಲಕಿ ಎದುರೇ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಸಂಬಂಧ ಬಾಲಕಿ ಪೋಷಕರು ಮೇ 25 ರಂದು ದೂರು ದಾಖಲಿಸಿದ್ದರು.

ಇಂತಹ ಕೃತ್ಯಗಳು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರಲಿದ್ದು, ಭಯ ಹಾಗೂ ಅಸಹ್ಯವನ್ನು ಉಂಟುಮಾಡಿಸುತ್ತದೆ. ಬಾಲಕಿ ಎದುರೇ ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.

ಇಂತಹದ್ದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ 2016ರಲ್ಲಿ 15 ವರ್ಷದ ಬಾಲಕಿ ವಿರುದ್ಧ ಇದೇ ರೀತಿ ಅಸಭ್ಯವಾಗಿ ವರ್ತಿಸಿದ್ದ 35 ವರ್ಷದ ಕ್ಯಾಬ್​ ಚಾಲಕನಿಗೆ ಪೋಕ್ಸೊ ಕಾಯಿದೆಯಡಿ ಒಂದು ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net