2030ಕ್ಕೆ ಶೇ. 50 ಹೆಚ್ಚಲಿದೆ ತೈಲ ಬೇಡಿಕೆ

Petrol
Petrol Bunk
Published on

ನವದೆಹಲಿ: ಭಾರತದಲ್ಲಿ ತೈಲ ಬೇಡಿಕೆ ಪ್ರಮಾಣ 2030ರ ಹೊತ್ತಿಗೆ ಶೇಕಡ 50 ಏರಿಕೆಯಾಗಲಿದೆ. ಜಾಗತಿಕ ಮಟ್ಟದಲ್ಲಿ ಇದು ಶೇಕಡ 7ರ ಪ್ರಮಾಣದಲ್ಲಿ ಇರಲಿದೆ ಎಂದು ಇಂಟರ್​ನ್ಯಾಷನಲ್ ಎನರ್ಜಿ ಏಜೆನ್ಸಿ ಬುಧವಾರ ತನ್ನ ಇತ್ತೀಚಿನ ಅಂದಾಜು ವರದಿಯಲ್ಲಿ ತಿಳಿಸಿದೆ.

2019ರಲ್ಲಿ ನಿತ್ಯ 4.80 ದಶಲಕ್ಷ ಬ್ಯಾರೆಲ್ ಇಂಧನ ಬಳಕೆ ಮಾಡುತ್ತಿದ್ದ ಭಾರತದಲ್ಲಿ 2030ರ ವೇಳೆ ಇದು ದಿನಕ್ಕೆ 7.20 ದಶಲಕ್ಷ ಬ್ಯಾರೆಲ್ ಮತ್ತು 2050ರ ಹೊತ್ತಿಗೆ 9.20 ದಶಲಕ್ಷ ಬ್ಯಾರೆಲ್ ಆಗಲಿದೆ. ತೈಲ ಬಳಕೆ ವಿಚಾರದಲ್ಲಿ ಅಮೆರಿಕ, ಚೀನಾ ನಂತರ ಮೂರನೇ ರಾಷ್ಟ್ರವಾಗಿ ಭಾರತ ಉಳಿಯಲಿದೆ. ಜಾಗತಿಕ ತೈಲ ಬೇಡಿಕೆ ಪ್ರಮಾಣ 2030ರ ವೇಳೆಗೆ ದಿನಕ್ಕೆ 103 ದಶಲಕ್ಷ ಬ್ಯಾರೆಲ್ ಮತ್ತು 2050ರ ಹೊತ್ತಿಗೆ ಬಹುತೇಕ ಇದೇ ಪ್ರಮಾಣದಲ್ಲಿ ಮುಂದುವರಿಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net