

Lizard : ಈಗಾಗಲೇ ಅನೇಕ ವನ್ಯ ಜೀವಿಗಳು ಅಳವಿನಂಚಿಗೆ ಸಾಗುತ್ತಿದ್ದು, ಅವುಗಳನ್ನು ಉಳಿಸಿಕೊಳ್ಳಬೇಕಾದ ಜವಬ್ದಾರಿ ನಮ್ಮೆಲ್ಲರ ಮೇಲಿದೆ. ಹೀಗಿರುವಾಗ ಇಲ್ಲೊಬ್ಬ ಯೂಟ್ಯೂಬರ್ ಅಪರೂಪದ ಓತಿಕ್ಯಾತವನ್ನು ಹಿಡಿದು ಅದರ ಖಾದ್ಯವನ್ನು ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಆತನನ್ನು ಬಂಧಿಸಲಾಗಿದೆ. ಈ ಘಟನೆ ಒಡಿಶಾದ ಮಯೂರ್‌ಭಂಜ್ ಜಿಲ್ಲೆಯಲ್ಲಿ ನಡೆದಿದೆ.
ಅಸನಬನಿ ಗ್ರಾಮದ ರೂಪಾ ನಾಯಕ್ ಎಂಬ ವ್ಯಕ್ತಿ ಇತ್ತೀಚೆಗೆ ಭದ್ರಕ್ನಲ್ಲಿರುವ ತನ್ನ ಪತ್ನಿಯ ಮನೆಗೆಗ ಹೋಗಿದ್ದರು. ಬಳಿಕ ಅಲ್ಲಿಂದ ಹಿಂತಿರುಗುವಾಗ, ಬಂಟಾ ಪ್ರದೇಶದ ಬಳಿ ರಸ್ತೆಯ ಬದಿಯಲ್ಲಿ ಅಪರೂಪದ ಸತ್ತ ಓತಿಕ್ಯಾತವನ್ನು ನೋಡಿದರು. ಬಳಿಕ ಅದನ್ನು ಮನೆಗೆ ತೆಗೆದುಕೊಂಡು ಹೋಗಿ, ಬೇಯಿಸಿ, ಚಿತ್ರೀಕರಿಸಿದನು. ನಂತರ ಅದನ್ನು ಫೇಸ್‌ಬುಕ್ ಮತ್ತು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿದನು.
ಈ ವಿಡಿಯೋ ವೈರಲ್ ಆಗಿ ಅರಣ್ಯ ಇಲಾಖೆಯ ಗಮನಕ್ಕೂ ಬಂದಿತು. ಕೂಡಲೇ ಪ್ರಕರಣ ದಾಖಲಿಸಿಕೊಂಡು ತಮ್ಮದೆಯಾದ ತನಿಖೆ ಆರಂಭಿಸಿದ ಅಧಿಕಾರಿಗಳು ರೂಪಾ ನಾಯಕ್ನನ್ನು ವಶಕ್ಕೆ ಪಡೆದರು. ವಿಚಾರಣೆಯ ಸಮಯದಲ್ಲಿ, ಆತ ತನ್ನ ಕೃತ್ಯಗಳನ್ನು ಒಪ್ಪಿಕೊಂಡನು. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ವಿವಿಧ ಸೆಕ್ಸನ್ಗಳ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈ ಪ್ರಕರಣವನ್ನು ಠಾಕೂರ್ಮುಂಡ ಅರಣ್ಯ ವ್ಯಾಪ್ತಿಯಲ್ಲಿ ದಾಖಲಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಭಾರತದಲ್ಲಿ ವನ್ಯಜೀವಿಗಳು ಮತ್ತು ಅವುಗಳ ಆವಾಸಸ್ಥಾನಗಳನ್ನು ರಕ್ಷಿಸಲು ಜಾರಿಗೆ ತಂದ ಕಾನೂನಾಗಿದೆ. (ಏಜೆನ್ಸೀಸ್)