ನರೇಗಾ ಕಾಮಗಾರಿ ವೀಕ್ಷಣೆ

DSC_3607
Published on

ಧಾರವಾಡ: ಬರ ಪರಿಸ್ಥಿತಿ ಇರುವ ತಾಲೂಕಿನ ಅಮ್ಮಿನಭಾವಿ ಗ್ರಾಮದಲ್ಲಿ ನಡೆಯುತ್ತಿರುವ ಉದ್ಯೋಗ ಖಾತ್ರಿ ಕಾಮಗಾರಿಯನ್ನು ಕೇಂದ್ರ ಬರ ಅಧ್ಯಯನ ತಂಡದ ಅಧಿಕಾರಿಗಳು ವೀಕ್ಷಿಸಿದರು.
ಅರಣ್ಯ ಇಲಾಖೆಯಿಂದ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಗ್ರಾಮದಲ್ಲಿ ಕೈಗೊಂಡಿರುವ ಗಿಡ ನೆಡುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಗ್ರಾಮದ ಹೊರವಲಯದಲ್ಲಿರುವ ಗೋಮಾಳದ ಜಾಗದಲ್ಲಿ ನರೇಗಾ ಕೂಲಿ ಕಾರ್ಮಿಕರು ಗಿಡ ನೆಡಲು ಗುಂಡಿ ತೋಡುತ್ತಿರುವುದನ್ನು ಅಧಿಕಾರಿಗಳು ವೀಕ್ಷಿಸಿದರು. ಇತ್ತೀಚೆಗೆ ಯಾವ ಕಾಮಗಾರಿಗಳಲ್ಲಿ ಕೆಸಲ ಮಾಡಿದ್ದೀರಿ? ಉದ್ಯೋಗ ಖಾತ್ರಿ ಹಣ ಸಕಾಲಕ್ಕೆ ಜಮೆಯಾಗುತ್ತಿದೆಯೇ? ಎಂದು ಕೂಲಿ ಕಾರ್ಮಿಕರನ್ನು ವಿಚಾರಿಸಿದರು. ಕೃಷಿ ಹೊಂಡ ನಿರ್ಮಾಣ, ಗಿಡ ನೆಡವುದು ಸೇರಿ ವಿವಿಧ ಕಾಮಗಾರಿಗಳಲ್ಲಿ ಕೆಲಸ ಮಾಡಿದ್ದೇವೆ ಎಂದು ಕೂಲಿ ಕಾರ್ಮಿಕ ಮಹಿಳೆ ಶಕೀಲಾ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net