ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಿಸಲು ಆಕ್ಷೇಪ

07 HANUR 3
ಕೋಣನಕೆರೆಯಲ್ಲಿ ಕುಂದು ಕೊರತೆ ಸಂಬಂಧ ಗಿರಿಜನ ಮುಖಂಡರ ಸಭೆ ನಡೆಯಿತು. ಭದ್ರ, ರಂಗೇಗೌಡ, ಮಹದೇವಸ್ವಾಮಿ, ದೀಪಕ್, ಮೀನಾ, ಮುನಿಮಾದಮ್ಮ ಇತರರು ಇದ್ದರು.
Published on

ಹನೂರು: ತಾಲೂಕಿನ ಕೋಣನಕೆರೆ ಗ್ರಾಮದ ಬುಡಕಟ್ಟು ಆಶ್ರಮ ಶಾಲೆಯಲ್ಲಿ ಮಂಗಳವಾರ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಲ್ ಸೋಲಿಗ ಅಭಿವೃದ್ಧಿ ಸಂಘದ ಅಧ್ಯಕ್ಷ ಭದ್ರ ಅಧ್ಯಕ್ಷತೆಯಲ್ಲಿ ಕುಂದು-ಕೊರತೆ ಸಂಬಂಧ ಗಿರಿಜನ ಮುಖಂಡರ ಸಭೆ ನಡೆಯಿತು.

ಈ ಸಭೆಯಲ್ಲಿ ಮಲೆಮಹದೇಶ್ವರ ವನ್ಯಜೀವಿ ಧಾಮವನ್ನು ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾಗಿ ಘೋಷಿಸಲು ಸರ್ಕಾರ ನಿರ್ಧರಿಸಿರುವುದರ ಬಗ್ಗೆ ಆಕ್ಷೇಪ ವ್ಯಕ್ತವಾಯಿತು. 2006ರ ಅರಣ್ಯ ಹಕ್ಕು ಕಾಯ್ದೆಯಡಿ ಸವಲತ್ತು ಪಡೆಯುವುದು. ಸಮುದಾಯದ ಹಕ್ಕು ಸದ್ಬಳಕೆ, ಸೋಲಿಗ ಅಭಿವೃದ್ಧಿ ಸಂಘದ ಬಲವರ್ದನೆ, ಸಮರ್ಪಕವಾಗಿ ಪಡಿತರ ಪಡೆಯುವುದು, ಹಾಡಿಗಳಿಗೆ ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಇನ್ನಿತರ ಅಗತ್ಯ ಮೂಲ ಸೌಕರ್ಯ ಪಡೆಯುವುದರ ಬಗ್ಗೆ ಚರ್ಚಿಸಲಾಯಿತು.

ಇದೇ ವೇಳೆ ಐಪಿಎಚ್ ಸಂಸ್ಥೆ ವತಿಯಿಂದ ಬಾಲ್ಯ ವಿವಾಹ, ತಾಯಿ ಮತ್ತು ಮಗುವಿನ ಆರೋಗ್ಯದ ಬಗ್ಗೆ ಅರಿವು ಮೂಢಿಸಲಾಯಿತು. ಸಭೆಯಲ್ಲಿ ತಾಲೂಕು ಅಭಿವೃದ್ಧಿ ಸಂಘದ ಕಾರ್ಯದರ್ಶಿ ರಂಗೇಗೌಡ, ಸಂಯೋಜಕ ಮಹದೇವಸ್ವಾಮಿ, ಐಪಿಎಚ್ ಸಂಸ್ಥೆಯ ದೀಪಕ್, ಮೀನಾ, ಮುಖಂಡರಾದ ಮುನಿಮಾದಮ್ಮ, ಮುನಿರಾಜು, ಶಿವಣ್ಣ, ಹುಚ್ಚಯ್ಯ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net