ಮನನೊಂದು ಯುವಕ ಆತ್ಮಹತ್ಯೆ

Crime Logo
Published on

ನ್ಯಾಮತಿ: ಅನಾರೋಗ್ಯ ಸಮಸ್ಯೆಯಿಂದ ಮಾನಸಿಕವಾಗಿ ನೊಂದಿದ್ದ ಯುವಕನೊಬ್ಬ ಭಾನುವಾರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪಟ್ಟಣದ ಶಿವಾನಂದಪ್ಪ ಬಡಾವಣೆಯ ಲೋಹಿತ್ (28) ಆತ್ಮಹತ್ಯೆ ಮಾಡಿಕೊಂಡ ಯುವಕ. ತಂದೆಯ ನಿಧನದ ನಂತರ ಕುಟುಂಬ ನಿರ್ವಹಣೆ ಮಾಡುತ್ತಿದ್ದ ಯುವಕ ಕೂಲಿ ಕೆಲಸ ಮಾಡುತ್ತಿದ್ದ.

ಸಹೋದರಿ ವಿವಾಹ ಮತ್ತು ಕುಟುಂಬ ನಿರ್ವಹಣೆಗೆ ಧರ್ಮಸ್ಥಳ ಸಂಘದಲ್ಲಿ 3 ಲಕ್ಷ ಹಾಗೂ ತಾಯಿಯ ಹೆಸರಿನಲ್ಲಿ ಫೈನಾನ್ಸ್‌ನಲ್ಲಿ 1ಲಕ್ಷ ಹಾಗೂ ಕೈಗಡ 2 ಲಕ್ಷ ಸಾಲ ಮಾಡಿದ್ದ. ಕಳೆದ ಎರಡ್ಮೂರು ದಿನಗಳಿಂದ ವಾಂತಿ ಹಾಗೂ ಹೊಟ್ಟೆ ನೋವು ಸಮಸ್ಯೆಯಿಂದ ಬಳಲುತ್ತಿದ್ದು, ಮಾನಸಿಕವಾಗಿ ನೊಂದಿದ್ದ ಎಂದು ನ್ಯಾಮತಿ ಪೊಲೀಸ್ ಠಾಣೆಗೆ ನೀಡಿದ ದೂರಿನಿಂದ ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net