ಚಿಪ್ಸ್, ಬಜ್ಜಿ, ಬೋಂಡಾ, ಬೋಟಿಯಂಥ ಕುರುಕಲು ತಿಂಡಿಗಳನ್ನು ಪದೇಪದೆ ಕರಿದ ಎಣ್ಣೆಯಲ್ಲಿ ತಯಾರಿಸಲಾಗುತ್ತದೆ. ಈ ತಿನಿಸುಗಳಿಗೆ ಬಳಸುವ ಬಣ್ಣ ಹಾಗೂ ರಾಸಾಯನಿಕಗಳು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಜತೆಗೆ ಬೇಕರಿ, ಹೋಟೆಲ್‌ಗಳು, ಫುಟ್‌ಪಾತ್ ಸ್ಟಾಲ್‌ಗಳಲ್ಲಿ ಮಾರಾಟ ಮಾಡುವ ಜಂಕ್ ಫುಡ್‌ಗಳ ತಯಾರಿಕೆಯಲ್ಲಿ ಅನೇಕ ರೀತಿಯ ಕೆಮಿಕಲ್ಸ್, ಕ್ಯಾನ್ಸರ್‌ಕಾರಕ ಬಣ್ಣ, ಅವಧಿಮೀರಿದ ಪದಾರ್ಥಗಳನ್ನು ಬಳಸುತ್ತಿರುವ ಘಟನೆಗಳು ಸುದ್ದಿಯಾಗುತ್ತಲೇ ಇವೆ. ಆದರೂ ಈ ರೀತಿಯ ಜಂಕ್ ಫುಡ್‌ಗೇನೇ ಬಹುತೇಕ ಮಂದಿ ಮಾರುಹೋಗುತ್ತಿರುವುದು ದುರದೃಷ್ಟಕರ.