ನೂತನ ದೇವಸ್ಥಾನ ಉದ್ಘಾಟನೆ ನಿಮಿತ್ತ ಧಾಮಿರ್ಕ ಕಾರ್ಯಕ್ರಮ ನ. 6ರಿಂದ

je721538035802367-abc
Published on

ರಾಣೆಬೆನ್ನೂರ: ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ನೂತನವಾಗಿ ನಿಮಿರ್ಸಿದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಉದ್ಘಾಟನೆ, ಮೂತಿರ್ ಪ್ರತಿಷ್ಠಾಪನೆ, ಭರಮದೇವರ ಕಳಸಾರೋಹಣ ಹಾಗೂ ವಿವಿಧ ಧಾಮಿರ್ಕ ಕಾರ್ಯಕ್ರಮ ನ. 6ರಿಂದ ನ. 9ರ ವರೆಗೆ ಜರುಗಲಿವೆ.

6ರಂದು ಮಧ್ಯಾಹ್ನ 2 ಗಂಟೆಗೆ ನಗರದ ಕೆಇಬಿ ಗಣೇಶ ದೇವಸ್ಥಾನದಿಂದ ಶ್ರೀ ಆಂಜನೇಯ ಸ್ವಾಮಿ ಮೂತಿರ್ ಮೆರವಣಿಗೆ ಜರುಗಲಿದೆ. 7ರಂದು ಬೆಳಗ್ಗೆ 7 ಗಂಟೆಗೆ ಕರಗಲು ಸ್ಥಾಪನೆ ಮಾಡಲಾಗುವುದು. 8ರಂದು ಬೆಳಗ್ಗೆ ಮೂತಿರ್ ಸ್ಥಾಪನೆ, ರುದ್ರಾಭಿಷೇಕ, ದೇವಸ್ಥಾನದ ಉದ್ಘಾಟನೆ, ಮೂತಿರ್ಯ ಪ್ರಾಣ ಪ್ರತಿಷ್ಠಾಪನೆ ಜರುಗುವುದು.

ಮಧ್ಯಾಹ್ನ 12 ಗಂಟೆಗೆ ಧರ್ಮಸಭೆ ಜರುಗಲಿದ್ದು, ರಟ್ಟಿಹಳ್ಳಿಯ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಲಿಂಗದಹಳ್ಳಿ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ದೇವಸ್ಥಾನ ಸಮಿತಿಯ ಅಧ್ಯಕ್ಷ ಚಂದ್ರಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತಿತರರು ಪಾಲ್ಗೊಳ್ಳುವರು.

ನ. 6ರಿಂದ ನ. 9ರವರೆಗೆ ನಾಲ್ಕು ದಿನಗಳ ಕಾಲ ಸಂಜೆ 7 ಗಂಟೆಗೆ ಪುಟ್ಟರಾಜ್​ ಗವಾಯಿಯವರ ಶಿಷ್ಯ ಬಸವ ಶಾಸ್ತ್ರೀ ಇರಕಲ್ಲ ಅವರಿಂದ ಕೀರ್ತನ ಕಾರ್ಯಕ್ರಮ ಜರುಗಲಿದೆ ಎಂದು ದೇವಸ್ಥಾನ ಸೇವಾ ಸಮಿತಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net