ಕೊವಿಡ್​-19 ಡ್ಯೂಟಿ ಮಾಡು ಎಂದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ನರ್ಸಿಂಗ್​ ವಿದ್ಯಾರ್ಥಿನಿ

Emergency
Published on

ಶಹಜಾನ್​ಪುರ: ಕೊವಿಡ್​​​-19 ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸು ಎಂದು ಹೇಳಿದ್ದಕ್ಕೆ ನರ್ಸಿಂಗ್​ ವಿದ್ಯಾರ್ಥಿನಿಯೋರ್ವರು ಆಸ್ಪತ್ರೆಯ ಮೊದಲ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಯತ್ನ ನಡೆಸಿದ್ದಾರೆ.

ವರುಣ್​ ಅರ್ಜುನ್​ ವೈದ್ಯಕೀಯ ಕಾಲೇಜಿನಲ್ಲಿ ಮಂಗಳವಾರ ಘಟನೆ ನಡೆದಿದೆ. ವಿದ್ಯಾರ್ಥಿನಿ ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇವಳು ಕೊವಿಡ್​-19 ಆಸ್ಪತ್ರೆಯಲ್ಲಿ ಕರ್ತವ್ಯ ಮಾಡಲು ನಿರಾಕರಿಸಿದ್ದಕ್ಕೆ ಆಸ್ಪತ್ರೆ ಸಿಬ್ಬಂದಿ ಮಾನಸಿಕ ಕಿರುಕುಳ ನೀಡಿದ್ದಾರೆ. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬದವರು ಆರೋಪ ಮಾಡಿದ್ದಾರೆ.

ನನಗೆ ಯಾವುದೇ ಆರೋಗ್ಯ ವಿಮಾ ಸೌಲಭ್ಯವಿಲ್ಲ. ಸಂಬಳವೂ ಜಾಸ್ತಿ ಇಲ್ಲ. ಅಷ್ಟಾದರೂ ಕೊವಿಡ್​-19 ಡ್ಯೂಟಿ ಮಾಡು ಎಂದು ಒತ್ತಡ ಹೇರುತ್ತಿದ್ದಾರೆ ಎಂದು ವಿದ್ಯಾರ್ಥಿನಿ ಸೋಷಿಯಲ್ ಮೀಡಿಯಾದಲ್ಲಿ ಮೊದಲು ವಿಡಿಯೋ ಅಪ್ಲೋಡ್​ ಮಾಡಿದ್ದಳು.

ಕುಟುಂಬದವರ ದೂರಿನ ಅನ್ವಯ ಪೊಲೀಸರು ಎಫ್​ಐಆರ್ ದಾಖಲು ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net