ಮುಟ್ಟು ನಿಲ್ಲುವಾಗ ಇದೆಲ್ಲ ಸಾಮಾನ್ಯವೆಂದು ಆರೋಗ್ಯ ನಿರ್ಲಕ್ಷ್ಯ ಮಾಡಿದ ನರ್ಸ್​​ಗೆ ಈಗ ಜೀವ ಉಳಿದಿದ್ದೇ ಹೆಚ್ಚು...

Nurse
Published on

ಈಕೆ ಓರ್ವ ನರ್ಸ್​. ತನ್ನೊಳಗಿದ್ದ ಅತಿದೊಡ್ಡ ಆರೋಗ್ಯ ಸಮಸ್ಯೆಯನ್ನೂ ಗುರುತಿಸಿಕೊಳ್ಳಲಾರದೆ ಹೋದರು.

ಸ್ಕಾಟ್ಲೆಂಡ್​​ನ ಅನ್ನಿ ಮರ್ಡಿ ಎಂಬುವರು ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಇವರಿಗೆ 55 ವರ್ಷ. ಕಳೆದ ಆಗಸ್ಟ್​​ನಲ್ಲಿ ಸೂಪರ್​ ಮಾರ್ಕೆಟ್​​ ಬಳಿ ಕಾರ್ ಪಾರ್ಕಿಂಗ್​ ಮಾಡುವ ಜಾಗದಲ್ಲಿ ಮೊದಲ ಬಾರಿಗೆ ಈಕೆ ಸ್ವಲ್ಪ ತಲೆ ಸುತ್ತಿದಂತಾಗಿ ಮುಗ್ಗರಿಸಿದರು. ಆದರೆ ಆ ಸಮಯದಲ್ಲಿ ಅವರು ಮಗಳನ್ನು ಎಲ್ಲಿಂದಲೋ ಕರೆದುಕೊಂಡು ಬರುವ ಅರ್ಜೆಂಟ್​​​ನಲ್ಲಿ ಇದ್ದಿದ್ದರಿಂದ ಜಾಸ್ತಿ ತಲೆ ಕೆಡಿಸಿಕೊಂಡಿರಲಿಲ್ಲ. ಏನೋ ಮುಗ್ಗರಿಸಿರಬೇಕು ಎಂದು ಮುಂದೆ ಸಾಗಿದ್ದರು.

ಅದಾದ ಬಳಿಕ ಕೆಲವು ತಿಂಗಳಲ್ಲಿ ಅನ್ನಿ ಮರ್ಡಿ ಅವರಿಗೆ ಮೆನೋಪಾಸ್​ (ಮುಟ್ಟು ನಿಲ್ಲುವ ಕಾಲ) ಸಮಸ್ಯೆ ಪ್ರಾರಂಭವಾಯಿತು. ಆಗ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದ ಕಾರಣ ಅವರು ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡರು. ಟೆಸ್ಟ್ ಮಾಡಿದ ವೈದ್ಯರು, ಮುಟ್ಟು ನಿಲ್ಲುವ ಸಮಯದಲ್ಲಿ ಇದೆಲ್ಲ ಸಾಮಾನ್ಯ ಎಂದು ಔಷಧಿ ಬರೆದುಕೊಟ್ಟರು.

ಆದರೆ ಬರುಬರುತ್ತ ನರ್ಸ್​ ಧ್ವನಿ ತುಂಬ ಸಣ್ಣದಾಯಿತು. ಸ್ವರ ಹೊರಬರದಂತಾಯಿತು. ಮಾನಸಿಕವಾಗಿ ತುಂಬ ಖಿನ್ನತೆಗೆ ಒಳಗಾದರು. ಚಿಕ್ಕಚಿಕ್ಕ ವಿಚಾರಕ್ಕೂ ಸಿಕ್ಕಾಪಟೆ ಅಳಲು ಶುರುಮಾಡಿದರು.

ಆದರೆ ನಂತರ ಎಂಆರ್​ಐ ಸ್ಕ್ಯಾನ್​ ಮಾಡಲಾಯಿತು. ಸ್ಕ್ಯಾನ್​ ಮಾಡಿದ ನಂತರವಷ್ಟೇ ಗೊತ್ತಾಯಿತು ಅವರ ಮಿದುಳಿನಲ್ಲಿ ಗಾಲ್ಫ್​ ಚೆಂಡಿನ ಗಾತ್ರದ ಮೆನಿಂಜಿಯೋಮಾ ಗಡ್ಡೆ ಇರುವುದು ಗೊತ್ತಾಯಿತು. ಇದನ್ನೂ ಓದಿ: ಪಾಕ್‌ಗೆ ಬಿಗ್‌ ಷಾಕ್‌: ಸಾಲವೂ ಬಂದ್‌, ತೈಲವೂ ಬಂದ್‌ ಎಂದ ಸೌದಿ ಅರೇಬಿಯಾ!

ಅನ್ನಿ ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು ಕೂಡಲೇ ಸರ್ಜರಿಗೆ ಸೂಚಿಸಿದರು. ಮೆನೋಪಾಸ್​ ಸಮಸ್ಯೆಯಿಂದಲೂ ಬಳಲುತ್ತಿದ್ದ ಅವರಿಗೆ ಸರ್ಜರಿ ಸ್ವಲ್ಪ ಕಷ್ಟವೇ ಆಗಿತ್ತು. ಆದರೂ ಸುಮಾರು 10 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿ ಗಡ್ಡೆಯನ್ನು ಹೊರಗೆ ತೆಗೆದಿದ್ದಾರೆ. ಇದೀಗ ಮನೆಯಲ್ಲೇ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಅವರ ಕಣ್ಣಿಗೆ ಎಲ್ಲವರೂ ಎರಡಾಗಿ ಕಾಣುತ್ತಿದೆ. ಮರಗಟ್ಟುವಿಕೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೂ ಸಂಪೂರ್ಣ ಗುಣಮುಖರಾಗುವ ವಿಶ್ವಾಸದಲ್ಲಿದ್ದಾರೆ.

ನನ್ನ ಮಗಳು ಹದಿಹರೆಯದಲ್ಲಿದ್ದಾಳೆ. ಈ ಸಮಯದಲ್ಲಿ ಅವಳ ಬೆಳವಣಿಗೆ ನೋಡಲು ಸಾಧ್ಯವಾಗಲಿಲ್ಲ ಎಂಬುದೇ ನನ್ನ ಸಂಕಟ ಎಂದಿರುವ ಅನ್ನಿ, ಒಂದು ಸಣ್ಣ ಆರೋಗ್ಯ ಸಮಸ್ಯೆಯನ್ನೂ ನಿರ್ಲಕ್ಷ್ಯ ಮಾಡಬೇಡಿ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net