ಈ ದಿನಾಂಕದಂದು ಜನಿಸಿದವರಿಗೆ 2025ರಲ್ಲಿ ರಾಜಯೋಗ! ನೀವು ಹುಟ್ಟಿದ್ದು ಇದೇ ದಿನಾನಾ? Numerology

Numerology
Published on

Numerology : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು ಕೂಡ ಇದ್ದಾರೆ. ಪ್ರತಿಯೊಂದು ಕೆಲಸ, ಕಾರ್ಯಗಳನ್ನು ಮಾಡಬೇಕಾದರೂ ಜೋತಿಷ್ಯದ ಮೊರೆ ಹೋಗುತ್ತಾರೆ. ಜ್ಯೋತಿಷ್ಯದಲ್ಲಿ ಅನೇಕ ಬಗೆಗಳಿರುವುದು ಎಲ್ಲರಿಗೂ ತಿಳಿದಿದೆ. ಅವುಗಳಲ್ಲಿ ಸಂಖ್ಯಾಶಾಸ್ತ್ರ ಮತ್ತು ಹಸ್ತಸಾಮುದ್ರಿಕ ಶಾಸ್ತ್ರವೂ ಒಂದು.

ಸಾಮಾನ್ಯವಾಗಿ ಸಂಖ್ಯೆಗಳು ನಮ್ಮ ಜೀವನದ ಎಲ್ಲ ವಿಷಯಗಳೊಂದಿಗೆ ಆಳವಾದ ಸಂಬಂಧವನ್ನು ಹೊಂದಿವೆ. ಅಲ್ಲದೆ, ಈ ಸಂಖ್ಯೆಗಳು ನೈಸರ್ಗಿಕವಾಗಿ ವಿಶ್ವದಲ್ಲಿ ವಿಶಿಷ್ಟ ಶಕ್ತಿಯನ್ನು ಹೊಂದಿದ್ದು, ಯಾರನ್ನಾದರೂ ಮೇಲಕ್ಕೇರಿಸಬಹುದು ಮತ್ತು ಕೆಳಗಿಳಿಸಬಹುದು. ಸಂಖ್ಯಾಶಾಸ್ತ್ರವು ವ್ಯಕ್ತಿಯ ಹೆಸರು, ಆತನ ಹುಟ್ಟಿದ ದಿನಾಂಕ, ತಿಂಗಳು, ವರ್ಷದ ಆಧಾರದ ಮೇಲೆ ಅವರ ಭವಿಷ್ಯದ ಜೀವನ ಹೇಗಿರುತ್ತದೆ ಎಂದು ಊಹಿಸುವ ವಿಜ್ಞಾನವಾಗಿದೆ.

ನಾವೀಗ ವರ್ಷದ ಕೊನೆಯ ತಿಂಗಳಿಗೆ ಪ್ರವೇಶ ಮಾಡಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ 2024 ಮುಗಿದು 2025ರ ಹೊಸ ವರ್ಷ ಬರಲಿದೆ. ಹೊಸ ವರ್ಷದಲ್ಲಿ ತಮ್ಮ ಅದೃಷ್ಟ ಬದಲಾಗುತ್ತಾ ಎಂದು ಯೋಚನೆ ಮಾಡುವವರು ಕೂಡ ಇದಾರೆ. ಅದಕ್ಕಾಗಿ ತಮ್ಮ ರಾಶಿಭವಿಷ್ಯ, ಜಾತಕವನ್ನು ತಿಳಿದುಕೊಳ್ಳಲು ತೀವ್ರ ಕುತೂಹಲವನ್ನು ಹೊಂದಿರುತ್ತಾರೆ. ಹೀಗಾಗಿ 2025ನೇ ವರ್ಷದ ಸಂಖ್ಯಾಶಾಸ್ತ್ರದ ಮುನ್ನೋಟಗಳನ್ನು ಆಧರಿಸಿ, ಯಾವ ಸಂಖ್ಯೆ ಅಡಿ ಜನಿಸಿದವರು ಹೊಸ ವರ್ಷದಲ್ಲಿ ರಾಜನಂತೆ ಜೀವನವನ್ನು ನಡೆಸುತ್ತಾರೆ ಎಂಬುದನ್ನು ನೋಡೋಣ.

ಅಂದಹಾಗೆ ಸಂಖ್ಯಾಶಾಸ್ತ್ರವನ್ನು ರಾಡಿಕ್ಸ್ ಸಂಖ್ಯೆಗಳ ಆಧಾರದ ಮೇಲೆ ಹೇಳಲಾಗುತ್ತದೆ. ಒಬ್ಬ ವ್ಯಕ್ತಿಯ ಜನ್ಮ ದಿನಾಂಕದ ಮೊತ್ತವನ್ನು ರಾಡಿಕ್ಸ್ ಸಂಖ್ಯೆ ಅಥವಾ ಮೂಲಾಂಕ ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಒಬ್ಬ 24ನೇ ತಾರೀಖಿನಂದು ಜನಿಸಿದರೆ ಆತನ ರಾಡಿಕ್ಸ್​ ಸಂಖ್ಯೆ 2+4= 6 ಆಗಿರುತ್ತದೆ. ರಾಶಿಗಳಂತೆ ರಾಡಿಕ್ಸ್​ ಸಂಖ್ಯೆಗಳು ಕೂಡ ಗ್ರಹಗಳೊಂದಿಗೆ ಸಂಬಂಧ ಹೊಂದಿವೆ. ಸಂಖ್ಯಾಶಾಸ್ತ್ರದಲ್ಲಿ 01 ರಿಂದ 09ರವರೆಗಿನ ಸಂಖ್ಯೆಗಳನ್ನು ರಾಡಿಕ್ಸ್ ಸಂಖ್ಯೆಗಳು ಎಂದು ಹೇಳಲಾಗುತ್ತದೆ. ಈ ಒಂಬತ್ತು ರಾಡಿಕ್ಸ್ ಸಂಖ್ಯೆಗಳು ಕೂಡ ನವಗ್ರಹಗಳಲ್ಲಿ ಒಂದೊಂದು ಗ್ರಹಗಳಿಗೆ ಸೀಮಿತವಾಗಿವೆ.

ಸಂಖ್ಯೆ 2

ಸಂಖ್ಯೆ 2ರಲ್ಲಿ ಜನಿಸಿದವರು ಸಂಖ್ಯಾಶಾಸ್ತ್ರದ ಪ್ರಕಾರ 2025ರಲ್ಲಿ ಹೆಚ್ಚಿನ ಸಂತೋಷವನ್ನು ಅನುಭವಿಸುತ್ತಾರೆ. ವೈವಾಹಿಕ ಜೀವನದಲ್ಲಿ ದೀರ್ಘಕಾಲದ ಸಮಸ್ಯೆಗಳು ಬಗೆಹರಿಯುತ್ತವೆ. ಕೌಟುಂಬಿಕ ಜೀವನದಲ್ಲಿನ ಭಿನ್ನಾಭಿಪ್ರಾಯಗಳು ನಿವಾರಣೆಯಾಗಿ ಸಾಮರಸ್ಯದ ವಾತಾವರಣ ನಿರ್ಮಾಣವಾಗಲಿದೆ. ಹಿಂದಿನ ತಪ್ಪುಗಳಿಂದ ಕಲಿಯಲು ಮತ್ತು ಭವಿಷ್ಯ ಜೀವನ ಸುಧಾರಿಸಲು ಇದು ಉತ್ತಮ ವರ್ಷವಾಗಿರುತ್ತದೆ. ನಿಮ್ಮ ತಪ್ಪುಗಳನ್ನು ಅರಿತುಕೊಳ್ಳಲು ನೀವು ವಿಶೇಷವಾಗಿ ಅವಕಾಶವನ್ನು ಪಡೆಯುತ್ತೀರಿ. ಆರ್ಥಿಕ ಪರಿಸ್ಥಿತಿಯಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಬೆಳವಣಿಗೆ ಕಂಡುಬರಲಿದೆ. ದೈಹಿಕ ಆರೋಗ್ಯ ಸ್ಥಿರವಾಗಿರುತ್ತದೆ. ನಿಮ್ಮ ಗುರಿಯತ್ತ ಯಶಸ್ವಿಯಾಗಿ ಸಾಗಲು ಅವಕಾಶಗಳಿವೆ.

ಸಂಖ್ಯೆ​ 4

ಈ ಸಂಖ್ಯೆಯ ಅಡಿಯಲ್ಲಿ ಜನಿಸಿದವರಿಗೆ 2025ರ ವರ್ಷವು ಧನಾತ್ಮಕ ಫಲಿತಾಂಶಗಳನ್ನು ತರುತ್ತದೆ. ಈ ವರ್ಷ ತಮ್ಮ ಬಹುಕಾಲದ ಆಸೆಗಳನ್ನು ಈಡೇರಿಸಿಕೊಳ್ಳುವ ಅವಕಾಶಗಳನ್ನು ಹೊಂದಿರುತ್ತಾರೆ. ಅಲ್ಲದೆ, ಸಂತೋಷ ಮತ್ತು ಐಷಾರಾಮಿ ಜೀವನ ನಡೆಸಲಿದ್ದಾರೆ. ವ್ಯಾಪಾರದ ವಿಷಯದಲ್ಲಿ ಸಕಾರಾತ್ಮಕ ಫಲಿತಾಂಶಗಳು ಕಂಡುಬರುತ್ತವೆ. ವ್ಯಾಪಾರದಲ್ಲಿರುವವರಿಗೆ ಲಾಭ ಹೆಚ್ಚಾಗುತ್ತದೆ. ರಾಹುವಿನ ಪ್ರಭಾವದಿಂದ ಶಾರೀರಿಕ ಸ್ಥಿತಿಯಲ್ಲಿ ಸ್ವಲ್ಪ ತೊಂದರೆಯಾಗುವ ಸಂಭವವಿದೆ. ಆದ್ದರಿಂದ, ಆಹಾರದ ಬಗ್ಗೆ ಸ್ವಲ್ಪ ಜಾಗರೂಕರಾಗಿರಬೇಕು. ಗುರು ಮತ್ತು ಶುಕ್ರನ ಆಶೀರ್ವಾದದಿಂದ 2025ರಲ್ಲಿ ಆರ್ಥಿಕ ಸ್ಥಿತಿಯಲ್ಲಿ ಮಹತ್ತರವಾದ ಬೆಳವಣಿಗೆ ಇರುತ್ತದೆ.

ಸಂಖ್ಯೆ 5

5ನೇ ಸಂಖ್ಯೆಯಡಿ ಜನಿಸಿದವರು 2025ರಲ್ಲಿ ಗಮನಾರ್ಹ ವೃತ್ತಿಪರ ಬೆಳವಣಿಗೆಯನ್ನು ಅನುಭವಿಸುತ್ತಾರೆ. ಅವರ ದೀರ್ಘಾವಧಿಯ ಶ್ರಮವು ಈ ವರ್ಷ ದುಪ್ಪಟ್ಟು ಪ್ರತಿಫಲವನ್ನು ಪಡೆಯುತ್ತದೆ. ಸದಾ ಕನಸು ಕಾಣುತ್ತಿದ್ದ ಜೀವನವನ್ನು ಈ ವರ್ಷ ಅನುಭವಿಸಲಿದ್ದಾರೆ. ವಿಶೇಷವಾಗಿ 5ನೇ ಸಂಖ್ಯೆಯ ಅಡಿಯಲ್ಲಿ ಜನಿಸಿದ ಮಹಿಳೆಯರು ಆರ್ಥಿಕ ವಿಚಾರದಲ್ಲಿ ಉತ್ತಮ ಬೆಳವಣಿ ಹೊಂದಿರುತ್ತಾರೆ. ಪುರುಷರಿಗೆ ಉನ್ನತ ಸ್ಥಾನಗಳನ್ನು ಅಲಂಕರಿಸಲು ಅವಕಾಶವಿದೆ. ಒಟ್ಟಾರೆಯಾಗಿ, ಈ ಸಂಖ್ಯೆಗಳ ಅಡಿಯಲ್ಲಿ ಜನಿಸಿದವರು ರಾಜ ಜೀವನವನ್ನು ನಡೆಸಲಿದ್ದಾರೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net