ಯುಜಿಸಿ ನೆಟ್ ಪರೀಕ್ಷೆಗಳು ಮುಂದೂಡಿಕೆ: ಎನ್​ಟಿಎ ಘೋಷಣೆ

ugc net
Published on

ನವದೆಹಲಿ: ಮೇ ತಿಂಗಳಿನಲ್ಲಿ ನಡೆಯಬೇಕಿದ್ದ ಯುಜಿಸಿ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೆಟ್) ಕರೊನಾ ಕಾರಣದಿಂದ ಮುಂದೂಡಲಾಗಿದೆ ಎಂದು ನ್ಯಾಷನಲ್ ಟೆಸ್ಟಿಂಗ್ ಏಜೇನ್ಸಿ (ಎನ್​ಟಿಎ) ಮಂಗಳವಾರ ತಿಳಿಸಿದೆ.

2020 ರ ಡಿಸೆಂಬರ್​ನಲ್ಲಿ ನಡೆಯಬೇಕಿದ್ದ ನೆಟ್ ಪರೀಕ್ಷೆಯನ್ನು ಮೇ 2 ರಿಂದ 17 ರ ಮಧ್ಯೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಇದೀಗ ದೇಶದಲ್ಲಿ ಕರೊನಾ ಎರಡನೇ ಅಲೆ ತೀವ್ರ ವ್ಯಾಪಿಸಿರುವ ಕಾರಣ ಮಹತ್ವದ ಪರೀಕ್ಷೆಗಳನ್ನು ಮುಂದಕ್ಕೆ ಹಾಕಲಾಗಿದೆ.

ಕರೊನಾ ಎರಡನೇ ಅಲೆ ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವುದರಿಂದ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಎನ್​ಟಿಎ ಮಹಾ ನಿರ್ದೇಶಕರಿಗೆ ಯುಜಿಸಿ ನೆಟ್ ಪರೀಕ್ಷೆಗಳನ್ನು ಮುಂದೂಡಲು ಸೂಚಿಸಿದ್ದೇನೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಕ್ರಿಯಾಲ್ ಟ್ವಿಟ್​​ನಲ್ಲಿ ಹೇಳಿದ್ದರು.

ಸಿಬಿಎಸ್​ಇ ಪರೀಕ್ಷೆಗಳ ಬಗ್ಗೆ ನಿರ್ಧಾರ ಕೈಗೊಂಡ ನಂತರ ನೆಟ್ ಪರೀಕ್ಷೆಗಳನ್ನು ಮುಂದೂಡವ ಎರಡನೇ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net