

ಪುತ್ತೂರು: ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎನ್.ಎಸ್.ಎಸ್. ಘಟಕಗಳ ವತಿಯಿಂದ ಸ್ವಯಂಸೇವಕರಿಗೆ ಕೃಷಿ ವಲಯದಲ್ಲಿ ಉದ್ಯಮಶೀಲತೆಯ ಅವಕಾಶ ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಭರತ್‌ರಾಜ್ ಜೇನು ಕೃಷಿಯ ಪ್ರಯೋಜನ ಹಾಗೂ ಉಪಯೋಗವನ್ನು ತಿಳಿಸಿದರು. ಅಧ್ಯಕ್ಷತೆಯನ್ನು ವಾಣಿಜ್ಯಶಾಸ್ತ್ರದ ಮುಖ್ಯಸ್ಥ ರಾಮಚಂದ್ರ ವಹಿಸಿದ್ದರು.
ಕೃತಿ ಸ್ವಾಗತಿಸಿದರು. ಎನ್‌ಎಸ್‌ಎಸ್ ಯೋಜನಾಽಕಾರಿ ಯೋಗೀಶ್ ಎಲ್. ಎನ್. ಪ್ರಸ್ತಾವನೆಗೈದರು. ಪ್ರಜ್ಞಾ ವಂದಿಸಿದರು. ಪ್ರತೀಕ್ಷಾ ಕಾರ್ಯಕ್ರಮ ನಿರೂಪಿಸಿದರು.