

ನಾಪೋಕ್ಲು: ಮಳೆ ಕಾರಣದಿಂದ ಬೇತು ಕಡೆಯಿಂದ ಪಟ್ಟಣವನ್ನು ಸಂಪರ್ಕಿಸುವ ಕಿರಿದಾದ ಅಪ್ಪಚ್ಚ ಕವಿ ರಸ್ತೆಯ ಇಕ್ಕೆಲಗಳಲ್ಲಿ ಸೋಮವಾರ ವಾಹನಗಳ ದಟ್ಟಣೆ ಕಂಡುಬಂತು. ಟ್ರಾಫಿಕ್ ಜಾಮ್‌ನಿಂದ ಜನಸಾಮಾನ್ಯರು, ವಿದ್ಯಾರ್ಥಿಗಳು ಪರದಾಡಿದರು. ಪಟ್ಟಣದ ರಸ್ತೆಯಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆ ಮಾಡುವವರೇ ಹೆಚ್ಚಾಗಿದ್ದಾರೆ. ಸಂಚಾರ ನಿಯಮ ಪಾಲಿಸುವಲ್ಲಿ ಆಸಕ್ತಿ ವಹಿಸದ ವಾಹನ ಸವಾರರಿಂದ ಪೊಲೀಸರು, ಹೋಂ ಗಾರ್ಡ್‌ಗಳು ಹರ ಸಾಹಸ ಪಡಬೇಕಾದ
ಸ್ಥಿತಿ ನಿರ್ಮಾಣವಾಗಿತ್ತು. ಸಂತೆಯ ದಿನವಾದ ಸೋಮವಾರ ಗ್ರಾಮಾಂತರ ಭಾಗಗಳಿಂದ ಮಾರುಕಟ್ಟೆಗೆ ಬರುವ ವಾಹನಗಳೂ ಹೆಚ್ಚಾಗಿದ್ದವು. ಹಾಗಾಗಿ ಮಳೆ ನಡುವೆ ಸಂಚಾರ ದಟ್ಟಣೆಯೂ ಅಧಿಕವಾಗಿ ನಾಗರಿಕರು ಪರದಾಡಿದರು.