

ಬೆಂಗಳೂರು: ನರೇಗಾ ಯೋಜನೆಯಡಿ ನೋಂದಾಯಿಸಿದ ನಿಷ್ಕ್ರಿಯ ಹಾಗೂ ಅನರ್ಹ ಕಾಯಕ ಬಂಧುಗಳಿಗೆ ಗೇಟ್ ಪಾಸ್ ನೀಡಲು ಸರ್ಕಾರ ಮುಂದಾಗಿದೆ.
ನಿಷ್ಕ್ರಿಯ 88, 948, ಅನರ್ಹ 11,748 ಕಾಯಕ ಬಂಧುಗಳ ಹೆಸರು ಸ್‌ಟಾನಿಂದ ತೆಗೆಯಲು ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದಿಂದ ಸಿಇಒಗಳಿಗೆ ಸೂಚನೆ ನೀಡಿದೆ.
ಈವರೆಗೆ 1,84,842 ಮೇಟ್ ಗಳ ಮಾಹಿತಿಯನ್ನು ಸ್‌ಟಾವೇರ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ಪೈಕಿ ಶೇ.50 ರಷ್ಟು ಮಂದಿ ಸಕ್ರಿಯವಲ್ಲದವರನ್ನು ಅಪ್‌ಲೋಡ್ ಮಾಡಿ ರುವುದು ಸರ್ವೇ ಮೂಲಕ ತಿಳಿದು ಬಂದಿದೆ. ಹಾಗಾಗಿ ನಿಷ್ಕ್ರಿಯರು ಹಾಗೂ
ಅನರ್ಹರನ್ನು ಕೈಬಿಡುವಂತೆ ಬಾಗಲಕೋಟೆ, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಧಾರವಾಡ, ಬೆಳಗಾವಿ, ಬಳ್ಳಾರಿ, ವಿಜಯನಗರ, ವಿಜಯಪುರ, ಚಿತ್ರದುರ್ಗ, ದಾವಣಗೆರೆ, ಚಿಕ್ಕಬಳ್ಳಾಪುರ, ಚಾಮರಾಜನಗರ, ಕೋಲಾರ, ರಾಮನಗರ, ಮೈಸೂರು, ಮಂಡ್ಯ ಮತ್ತು ಉತ್ತರ ಕನ್ನಡ ಜಿಲ್ಲೆ ಸಿಇಒಗಳಿಗೆ ನಿರ್ದೇಶನ ನೀಡಲಾಗಿದೆ.
ಅಲ್ಲದೆ, ನರೇಗಾ ಯೋಜನೆಯಡಿ ಮಹಿಳಾ ಕೂಲಿಕಾರರ ಭಾಗವಹಿಸುವಿಕೆ ಹೆಚ್ಚಿಸಲು ಹಾಗೂ ಕಾಯಕ ಸಂಘಗಳನ್ನು ಸಕ್ರಿಯಗೊಳಿಸುವ ಸಲುವಾಗಿ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಕಾಯಕ ಬಂಧುಗಳಿಗೆ ತರಬೇತಿ ನೀಡಲು 20 ಜಿಲ್ಲೆಯ 50 ತಾಲೂಕುಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ತಾಲೂಕುಗಳಲ್ಲಿ ಮೊದಲ ಹಂತವಾಗಿ 15,000 ಕಾಯಕ ಬಂಧುಗಳಿಗೆ ತರಬೇತಿ ನೀಡಲು ಉದ್ದೇಶಿಸಿರುವುದಾಗಿಯೂ ಸುತ್ತೋಲೆ ತಿಳಿಸಿದೆ.