

ಶಿವಮೊಗ್ಗ: ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರನ್ನು ಮಂಗಳವಾರ ರಾತ್ರಿ ಪೊಲೀಸರು ತಡೆದು ಖಾಸಗಿ ವಾಹನದ ಮೂಲಕ ದಾವಣಗೆರೆಗೆ ಕಳುಹಿಸಿಕೊಟ್ಟರು.
ಮಂಗಳೂರಿನಿಂದ ಖಾಸಗಿ ಬಸ್‌ನಲ್ಲಿ ಶಿವಮೊಗ್ಗಕ್ಕೆ ಬರುತ್ತಿದ್ದಾಗ ಗಡಿಭಾಗದ ಮಾಸ್ತಿಕಟ್ಟೆಯಲ್ಲಿ ಐದಾರು ಪೊಲೀಸ್ ವಾಹನಗಳ ಮೂಲಕ ತಡೆದು ನಿಲ್ಲಿಸಿದರು. ಮುತಾಲಿಕ್ ಅವರನ್ನು ಬಸ್‌ನಿಂದ ಇಳಿಸಿ ರಾಗಿಗುಡ್ಡದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು ಪ್ರವೇಶಿಸುವಂತಿಲ್ಲ. ಅಲ್ಲದೆ ಒಂದು ತಿಂಗಳು ಶಿವಮೊಗ್ಗ ಪ್ರವೇಶಿಸದಂತೆ ನೋಟಿಸ್ ನೀಡಿದರು. ಅಲ್ಲಿಂದಲೇ ಖಾಸಗಿ ವಾಹನದಲ್ಲಿ ನೆರೆಯ ದಾವಣಗೆರೆಗೆ ಕಳುಹಿಸಿಕೊಟ್ಟರು.
ಮುತಾಲಿಕ್ ಅವರು ಶಿವಮೊಗ್ಗದ ರಾಗಿಗುಡ್ಡಕ್ಕೆ ಭೇಟಿ ನೀಡಿ ಹಿಂದು ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಲಿದ್ದರು. ಆದರೆ ಅದಕ್ಕೆ ಪೊಲೀಸರು ತಡೆವೊಡ್ಡಿದರು.