ತಂತ್ರಜ್ಞಾನ ಕ್ರಾಂತಿಗೆ ರಾಜೀವ್ ಗಾಂಧಿ ಬುನಾದಿ

DKS
Published on

ಬೆಂಗಳೂರು: ದೇಶದ ಯುವಕರಿಗೆ 18ನೇ ವಯಸ್ಸಿಗೆ ಮತದಾನದ ಹಕ್ಕು ಮತ್ತು ತಂತ್ರಜ್ಞಾನ ಕ್ರಾಂತಿಗೆ ಬುನಾದಿ ಹಾಕಿದ್ದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಮರಿಸಿದ್ದಾರೆ.

ನಗರದ ಕಂಠೀರವ ಸ್ಟೇಡಿಯಂ ಬಳಿ ಭಾನುವಾರ ಆಯೋಜಿಸಿದ್ದ ‘ರನ್ ಫಾರ್ ರಾಜೀವ್’ ಮ್ಯಾರಥಾನ್‌ಗೆ ಚಾಲನೆ ನೀಡಿ ಮಾತನಾಡಿದರು. ನಾನು ಚಿಕ್ಕ ವಯಸ್ಸಿನಲ್ಲಿ 10-15 ಕಿ.ಮೀ ಓಡುತ್ತಿದ್ದೆ. ಯುವಕರಿಗೆ 21 ವರ್ಷಕ್ಕೆ ಮತದಾನದ ಹಕ್ಕು ನೀಡಲಾಗಿತ್ತು. ಅದನ್ನು 18 ವರ್ಷಕ್ಕೆ ಇಳಿಸಿದ್ದು ರಾಜೀವ್ ಗಾಂಧಿ. ಈ ನಿರ್ಧಾರವನ್ನು ಪ್ರತಿಪಕ್ಷದವರು ಟೀಕೆ ಮಾಡಿದರು. 16ನೇ ವಯಸ್ಸಿಗೆ ಎಸ್‌ಎಸ್‌ಎಲ್ಸಿ ಪಾಸಾದ ಯುವಕರನ್ನು ದೇಶದ ಗಡಿ ಕಾಯಲು ಸೇನೆಗೆ ನೇಮಿಸುತ್ತೇವೆ. ಅದೇ ರೀತಿ ಪ್ರಜಾಪ್ರಭುತ್ವ ಕಾಯಲು ಮತದಾನದ ಹಕ್ಕು ನೀಡಲಾಗುತ್ತಿದೆ.

ಪ್ರಜಾಪ್ರಭುತ್ವದಲ್ಲಿ ಪಂಚಾಯಿತಿಯಿಂದ ಸಂಸತ್‌ವರೆಗೆ ಜನಪ್ರತಿನಿಧಿಗಳು ಆಯ್ಕೆ ಆಗಬೇಕು ಎಂದು ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು. ಲ್ಯಾಂಡ್ ಲೈನ್ ದೂರವಾಣಿ ಸಂಪರ್ಕ ಪಡೆಯಲು 3-4 ವರ್ಷ ಕಾಯಬೇಕಿತ್ತು. ತಂತ್ರಜ್ಞಾನ ಕ್ರಾಂತಿ ಮೂಲಕ ಇಂದು ನಮ್ಮ ಕೈಯಲ್ಲಿ ಮೊಬೈಲ್ ಬರುವಂತೆ ಮಾಡಿರುವುದೇ ರಾಜೀವ್ ಗಾಂಧಿ, ಅವರಿಗೆ ಅಭಿನಂದನೆಗಳು ಎಂದರು.

ಬೆಂಗಳೂರು ಈಗ ಗ್ರೇಟರ್ ಬೆಂಗಳೂರು ಆಗಿದೆ. ಇತ್ತೀಚಿಗೆ ನಗರಕ್ಕೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಭಾರತವನ್ನು ಬೆಂಗಳೂರಿನ ಮೂಲಕ ನೋಡಲಾಗುತ್ತಿದೆ ಎಂದರು. ಇದು ಸಾಧ್ಯವಾಗಿದ್ದು ಯುವಕರಿಂದ.

ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net