

ಬೆಂಗಳೂರು: ಬಿಜೆಪಿ- ಜೆಡಿಎಸ್ ನಡೆಸುತ್ತಿರುವುದು ಗೊಂದಲದ ಯಾತ್ರೆ, ಇದು ಪಾದಯಾತ್ರೆಯಲ್ಲ ದ್ವೇಷದ ಯಾತ್ರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ, ಜೆಡಿಎಸ್ ಪಾದಯಾತ್ರೆಗೆ ಯಾವುದೇ ಆಧಾರಗಳಿಲ್ಲ. ಇದು ಸರ್ಕಾರವನ್ನ ಅಸ್ಥಿರಗೊಳಿಸುವುದು. ಜತೆಗೆ ಸಿಎಂ ಸಿದ್ದರಾಮಯ್ಯ ಹೆಸರಿಗೆ ಕಳಂಕ ತರುವುದೇ ಪಾದಯಾತ್ರೆಯ ಉದ್ದೇಶ ಎಂದು ಕುಟುಕಿದರು.
ಭ್ರಷ್ಟಾಚಾರದ ಆರೋಪ ಬಂದಾಗ ನಮ್ಮ ಸರ್ಕಾರ ತಕ್ಷಣವೇ ಕ್ರಮಕೈಗೊಂಡಿದೆ, ಬಿಜೆಪಿ ಸರ್ಕಾರದ ಅವಧಿಯಲ್ಲಿನ ಭ್ರಷ್ಟಾಚಾರದ ತನಿಖೆ ನಡೆಯುತ್ತಿದೆ. ಕುಮಾರಸ್ವಾಮಿ ವಿರುದ್ಧವೂ ಆರೋಪಗಳು ಬಂದಿದೆ. ದೇವೇಗೌಡರ ಕುಟುಂಬದ ವಿರುದ್ಧ ದೊಡ್ಡ ಆರೋಪಗಳು ಬರುತ್ತಿವೆ. ಅದರ ವಿರುದ್ಧವೂ ತನಿಖೆ ಆಗಲಿದೆ ಎಂದು ಹೇಳಿದರು.
ಭೂಮಿ ವಿಚಾರದಲ್ಲಿ ನೂರೆಂಟು ಕಾನೂನು ಇರುತ್ತೆ, ಅಬ್ರಹಾಂ ಹೈಯರ್ಡ್ ಏಜೆಂಟ್. ಯಾರೋ ಒಬ್ಬರು ಅವರಿಗೆ ಕಾಂಟ್ರಾಕ್ಟ್ ಕೊಟ್ಟಿದ್ದಾರೆ. ಈ ಸರ್ಕಾರವನ್ನ ಉರುಳಿಸಬೇಕೆಂದು ಹೊರಟಿದ್ದಾರಲ್ಲಾ ಅವರೇ ಇದನ್ನ ಮಾಡಿದ್ದಾರೆ ಎಂದರು.