ಉತ್ತರ ಕೊರಿಯಾ ಕರೊನಾಮುಕ್ತ

North Korea
Published on

ಸಿಯೋಲ್: ಉತ್ತರ ಕೊರಿಯಾದಲ್ಲಿ ಒಂದೇ ಒಂದು ಕರೊನಾ ವೈರಸ್ ಪ್ರಕರಣವೂ ಪತ್ತೆಯಾಗಿಲ್ಲ ಎಂದು ಅಲ್ಲಿನ ವೈದ್ಯಕೀಯ ಇಲಾಖೆ ತಿಳಿಸಿದೆ.

ಅನೇಕರನ್ನು ಪ್ರತ್ಯೇಕಿಸಿಡಲಾಗಿತ್ತಾದರೂ ಅವರಲ್ಲಿ ಸೋಂಕು ಪತ್ತೆಯಾಗಿಲ್ಲ. ಪಕ್ಕದ ಚೀನಾದಲ್ಲಿ ಕರೊನಾ ಪತ್ತೆಯಾಗುತ್ತಿದ್ದಂತೆ ಎಚ್ಚೆತ್ತುಕೊಂಡು ಗಡಿ ಸಂಪರ್ಕ ಕಡಿತಗೊಳಿಸಿ, ಕಟ್ಟುನಿಟ್ಟಿನ ಕ್ರಮ ಅನುಸರಿಸಿದ್ದರಿಂದಾಗಿ ದೇಶದಲ್ಲಿ ಸೋಂಕು ಹರಡಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ಈ ಹಿಂದೆಯೂ ಕೂಡ ತಮ್ಮ ದೇಶದಲ್ಲಿ ಸೋಂಕು ಹರಡಿಲ್ಲ ಎಂದು ಹೇಳಲಾಗಿತ್ತು. ಆದರೆ ಅದರ ಬಗ್ಗೆ ಹಲವಾರು ಅನುಮಾನಗಳು ಮೂಡಿದ್ದು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಉ.ಕೊರಿಯಾ ಸತ್ಯಾಂಶವನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದ್ದರು. ಅದಕ್ಕೆ ಪ್ರತಿಯಾಗಿ ತಾವು ತೆಗೆದುಕೊಂಡ ಕಠಿಣ ಕ್ರಮದ ಫೋಟೋಗಳನ್ನು ಉ.ಕೊರಿಯಾ ಬಿಡುಗಡೆ ಮಾಡಿತ್ತು. ದೇಶದ ಜನರೆಲ್ಲರೂ ಮಾಸ್ಕ್ ತೊಟ್ಟಿದ್ದ ಫೋಟೋ ಮತ್ತು ಕೆಲವರನ್ನು ಐಸೋಲೇಷನ್ ಮಾಡಿಟ್ಟಿದ್ದ ಫೋಟೋಗಳು ಅದಾಗಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net