ಕರ್ನಾಟಕಕ್ಕೆ ಮತ್ತೆ ವರುಣಾಘಾತ...? ಹವಾಮಾನ ಕೇಂದ್ರದ ಮುನ್ಸೂಚನೆ

rain
rain
Published on

ಧಾರವಾಡ: ಮಳೆಯ ಆರ್ಭಟದಿಂದ ಈಗಷ್ಟೇ ಸುಧಾರಿಸಿಕೊಂಡಿರುವ ಉತ್ತರ ಕರ್ನಾಟಕಕ್ಕೆ ಮತ್ತೆ ವರುಣಾಘಾತ ಉಂಟಾಗುವ ಸಾಧ್ಯತೆಗಳು ಎದುರಾಗಿವೆ. ಈ ಕುರಿತಾಗಿ ಕರ್ನಾಟಕ ಕೃಷಿ ಹವಾಮಾನ ಕೇಂದ್ರದಿಂದ ಮುನ್ಸೂಚನೆ ನೀಡಿದೆ.

ಫೆಬ್ರವರಿ 17ರಿಂದ 19ವರೆಗೆ ಉತ್ತರ ಕರ್ನಾಟಕದ ವಿವಿಧ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ. ಫೆ. 17ರಂದು ಧಾರವಾಡ, ಉತ್ತರ ಕನ್ನಡ, ಬೆಳಗಾವಿ, ಬೀದರ, ಕಲಬುರ್ಗಿ, ಹಾವೇರಿ ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಫೆ. 18ರಂದು ಧಾರವಾಡ, ಉತ್ತರ ಕನ್ನಡ, ಬೆಳಗಾವಿ, ಬೀದರ, ಕೊಪ್ಪಳ, ಗದಗ, ಹಾವೇರಿ ಭಾಗದಲ್ಲಿ ಆಲಿಕಲ್ಲು ಮಳೆ ಹಾಗೂ ಫೆ. 19ರಂದು ಉತ್ತರ ಕರ್ನಾಟಕ ಭಾಗದ ಅನೇಕ ಕಡೆ ಮಳೆ ಆಗುವ ಸಾಧ್ಯತೆಯಿದೆ ಎಂದು ಹವಾಮಾನ ಕೇಂದ್ರ ಮುನ್ಸೂಚನೆಯಲ್ಲಿ ತಿಳಿಸಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net