ವಾರ ಪೂರ್ತಿ ನೂಡಲ್ಸ್ ತಿಂದು ಆಸ್ಪತ್ರೆಗೆ ದಾಖಲಾದ 24 ವರ್ಷದ ಯುವತಿಗೆ ಕಿಡ್ನಿ ಸ್ಟೋನ್​; ಅತಿಯಾಗಿ ನೂಡಲ್ಸ್​ ತಿಂದ್ರೆ ಕಿಡ್ನಿ ಸ್ಟೋನ್​​ ಆಗುತ್ತೆ ಎಚ್ಚರ…!

noofinal
Published on

ಅಮೆರಿಕಾ: ಇಂದಿನ ಮಕ್ಕಳು ಫಾಸ್ಟ್ ಫುಡ್ ಅನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಅವು ಆರೋಗ್ಯಕ್ಕೆ ಹಾನಿಕರ ಎಂದು ತಿಳಿದಿದ್ದರೂ ಮಕ್ಕಳು ಕೆಲವೊಮ್ಮೆ ಹಠ ಮಾಡಿ ತಿನ್ನುತ್ತವೆ. ಪೋಷಕರು ಕೂಡ ಕಡಿಮೆ ಸಮಯದಲ್ಲಿ ಮಾಡಬಹುದು ಎಂದು ಮಾಡಿಕೊಡುತ್ತಾರೆ. ಆದರೆ ಇನ್ಮುಂದೆ ನೂಡಲ್ಸ್​​ ತಿನ್ನೋದ್ರಿಂದ ನಿಮ್ಮ ಮಕ್ಕಳು ಕಿಡ್ನಿ ಸ್ಟೋನ್​​​ಗೆ ತುತ್ತಾಗಬಹುದು ಎಚ್ಚರ ವಹಿಸಿ.

ಇತ್ತೀಚೆಗಷ್ಟೇ ಅಮೆರಿಕಾದ ಲೂಸಿ ಮೌರಾದ್ ಎಂಬ 24 ವರ್ಷದ ಯುವತಿ ಕೊರಿಯಾದ ಫೇಮಸ್​​ ನೂಡಲ್ಸ್​​ ಬ್ರ್ಯಾಂಡ್​​ ಆಗಿರುವಂತಹ ರಾಮೆನ್​ ನೂಡಲ್ಸ್​​ ಅನ್ನು ಅತಿಯಾಗಿ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ರು.

ಸದ್ಯ ಈ ಬಗ್ಗೆ ಮಾತನಾಡಿದ ಯುವತಿ, ನಾನು ಕೆಲ ತಿಂಗಳಿನಿಂದಲೂ ಸಹಿತ ದಿನದ ಮೂರು ಹೊತ್ತೂ ರಾಮೆನ್​ ನೂಡಲ್ಸನ್ನೇ ತಿಂದಿದ್ದೇನೆ. ಅದರಿಂದಾಗಿ ನಾನು ಬೆನ್ನು ನೋವು ಮತ್ತು ಹೊಟ್ಟೆಯಲ್ಲಿ ನೋವಿನಂತಹ ರೋಗಲಕ್ಷಣಗಳನ್ನು ಅನುಭವಿಸಿ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ಯೂಟ್ಯೂಬ್​ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾಳೆ.


ಜನ ಸಾಮಾನ್ಯರಿಗೆ ನೂಡಲ್ಸ್​​ ಅತಿಯಾಗಿ ಸೇವಿಸುವುದರಿಂದ ಆಗುವ ತೊಂದರೆಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಬಗ್ಗೆ ಸಂದರ್ಶನದಲ್ಲಿ ಹೇಳಿತ್ತಿದ್ದೇನೆ ಅಂತಲೂ ಲೂಸಿ ಮೌರಾದ್ ಹೇಳಿದ್ದಾರೆ.

USDA (ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಅಗ್ರಿಕಲ್ಚರ್) ಜನರು ದಿನಕ್ಕೆ 2,300 ಮಿಲಿಗ್ರಾಂಕಿಂತಲೂ ಹೆಚ್ಚು ಉಪ್ಪನ್ನ ತಿನ್ನಬಾರದು ಎಂದು ಶಿಫಾರಸು ಮಾಡಿದೆ. ಆದರೆ ರಾಮೆನ್​(ಮೈದಾ) ನೂಡಲ್ಸ್​​ನ ಒಂದು ಪಾಕ್​ ಸುಮಾರು 1,280 ಮಿಲಿಗ್ರಾಂ ಉಪ್ಪನ್ನು ಹೊಂದಿರುತ್ತದೆ.

ಮಹಿಳೆ ಮೂರು ಬಾರಿ ನೂಡಲ್ಸ್​​ ಅನ್ನೇ ಸೇವಿಸಿರೋದ್ರಿಂದ ಸುಮಾರು 6900 ಮಿಲಿಗ್ರಾಂನಷ್ಟು ಉಪ್ಪು ಸೇವಿಸಿದಂತಾಗಿದೆ. ಹಾಗಾಗಿಯೇ ಮಹಿಳೆಗೆ ಕಿಡ್ನಿ ಸ್ಟೋನ್​​​​ನಿಂದ ಬಳಲುವಂತಾಗಿದೆ ಎಂದು ವೈದ್ಯರೂ ತಿಳಿಸಿದ್ದಾರೆ.

ಸದ್ಯ ಈ ಬಗ್ಗೆ ದೆಹಲಿಯ CK ಬಿರ್ಲಾ ಆಸ್ಪತ್ರೆಯ ಕನ್ಸಲ್ಟೆಂಟ್ ನೆಫ್ರಾಲಜಿಸ್ಟ್ ಡಾ. ವಿಕ್ರಮ್​ ಕಲ್ರಾ ಮಾಹಿತಿ ನೀಡಿದ್ದು, ರಾಮೆನ್ ನೂಡಲ್ಸ್‌ನ ಹೆಚ್ಚಿನ ಸೋಡಿಯಂ ಅಂಶವನ್ನ ಹೊಂದಿದೆ. ಇದು ಮೂತ್ರದ ಕ್ಯಾಲ್ಸಿಯಂ ಮಟ್ಟವನ್ನು ಹೆಚ್ಚಿಸುತ್ತದೆ ಇದು ಬೇರೆ ವೇಸ್ಟ್​​ ಪ್ರಾಡಕ್ಟ್ಸ್​​​ಗಳ ಜತೆಗೆ ಸೇರಿಕೊಂಡು ಕಿಡ್ನಿ ಸ್ಟೋನ್​ ಆಗಲಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net