

ತುಮಕೂರು: ಜಿಲ್ಲೆಯ ಜಾನುವಾರುಗಳನ್ನು ಕಾಡುತ್ತಿರುವ ಚರ್ಮಗಂಟು ರೋಗಕ್ಕೆ ಈವರೆಗೆ 1124 ರಾಸು ಮೃತಪಟ್ಟಿದ್ದು, ರೈತರಿಗೆ ಯಾವುದೇ ಪರಿಹಾರ ಕೂಡ ಲಭ್ಯವಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜಿಲ್ಲೆಯಲ್ಲಿ 9692 ರಾಸುಗಳಿಗೆ ಮಹಾಮಾರಿ ಚರ್ಮಗಂಟು ರೋಗ ತಗುಲಿದ್ದು, ಅದೃಷ್ಟಕ್ಕೆ ಬಹುತೇಕ ಹಸುಗಳು ಗುಣಮುಖವಾಗುತ್ತಿವೆ. ರೋಗ ಸಂಪೂರ್ಣ ಹತೋಟಿಗೆ ಬರದಿರುವ ಹಿನ್ನೆಲೆಯಲ್ಲಿ ರೈತರು ಮತ್ತಷ್ಟು ದಿನ ಮುಂಜಾಗ್ರತೆವಹಿಸುವ ಅಗತ್ಯವಿದೆ.
ಗುಬ್ಬಿ, ಪಾವಗಡ ಸೇರಿ ಜಿಲ್ಲೆಯೆಲ್ಲೆಡೆ ಪ್ರಸ್ತುತ ಜಿಲ್ಲೆಯಲ್ಲಿ 2278 ರಾಸುಗಳಿಗೆ ರೋಗವಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಹಾಲು ಕೊಡುವ ಹಸುಗಳಲ್ಲಿಯೂ ಈ ರೋಗ ಕಾಣಿಸಿಕೊಳ್ಳುತ್ತಿರುವುದು ರೈತರ ಆತಂಕ ಹೆಚ್ಚಿಸಿದೆ.
ಚಿಕ್ಕನಾಯಕನಹಳ್ಳಿ ತಾಲೂಕಿನ 234, ತುರುವೇಕೆರೆ 162, ತಿಪಟೂರು 91, ಮಧುಗಿರಿ 61, ಶಿರಾ 250, ಕೊರಟಗೆರೆ 211, ಕುಣಿಗಲ್ 128, ಪಾವಗಡ 125, ಗುಬ್ಬಿ 189 ಹಾಗೂ ತುಮಕೂರು ತಾಲೂಕಿನ 243 ಗ್ರಾಮಗಳಲ್ಲಿ ರಾಸುಗಳಿಗೆ ಚರ್ಮಗಂಟು ರೋಗ ತಗುಲಿದೆ.
ಚಿಕ್ಕನಾಯಕನಹಳ್ಳಿ 57090, ತುರುವೇಕೆರೆ 57309, ತಿಪಟೂರು 61209, ಮಧುಗಿರಿ 46938, ಶಿರಾ 53642, ಕೊರಟಗೆರೆ 41653, ಕುಣಿಗಲ್ 77635, ಪಾವಗಡ 44376, ಗುಬ್ಬಿ 64525, ತುಮಕೂರು 68921 ಜಾನುವಾರು ಜಿಲ್ಲೆಯಲ್ಲಿ 573298 ಜಾನುವಾರುಗಳಿವೆ.
ಚಿಕ್ಕನಾಯಕನಹಳ್ಳಿ ತಾಲೂಕಿನ 550, ತುರುವೇಕೆರೆ 303, ತಿಪಟೂರು 329, ಮಧುಗಿರಿ 337, ಶಿರಾ 3,267, ಕೊರಟಗೆರೆ 657, ಕುಣಿಗಲ್ 562, ಪಾವಗಡ 1,478, ಗುಬ್ಬಿಯಲ್ಲಿ 1,076, ತುಮಕೂರಲ್ಲಿ 9,687 ಜಾನುವಾರುಗಳು ರೋಗದಿಂದ ಗುಣವಾಗಿವೆ.
ಶೇ.87 ರಾಸುಗಳಿಗೆ ಲಸಿಕೆ: ಚಿಕ್ಕನಾಯಕನಹಳ್ಳಿಯಲ್ಲಿ 48700, ತುರುವೇಕೆರೆ 46397, ತಿಪಟೂರು 57684, ಮಧುಗಿರಿ 44759, ಶಿರಾ 47856, ಕೊರಟಗೆರೆ 38586, ಕುಣಿಗಲ್ 55500, ಪಾವಗಡ 43600, ಗುಬ್ಬಿ 54423, ತುಮಕೂರಲ್ಲಿ 60475 ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ.
ಮರಣ ಮತ್ತು ಸಕ್ರಿಯ ಪ್ರಕರಣ ತಾಲೂಕು ಮರಣ ಸಕ್ರಿಯ ಚಿ.ನಾ.ಹಳ್ಳಿ 48 133 ತುರುವೇಕೆರೆ 35 32 ತಿಪಟೂರು 64 24 ಮಧುಗಿರಿ 88 28 ಶಿರಾ 254 116 ಕೊರಟಗೆರೆ 108 101 ಕುಣಿಗಲ್ 144 027 ಪಾವಗಡ 198 758 ಗುಬ್ಬಿ 117 890 ತುಮಕೂರು 66 169
ಜಿಲ್ಲೆಯಲ್ಲಿ ಇನ್ನೂ 2278 ರಾಸುಗಳು ಚರ್ಮಗಂಟು ರೋಗದಿಂದ ಬಳಲುತ್ತಿವೆ, ಅಂಟು ರೋಗವಾಗಿದ್ದು ರೈತರು ರಾಸುಗಳನ್ನು ಗುಂಪು, ಗುಂಪಾಗಿ ಸೇರಿಸಬಾರದು. ಜಾತ್ರೆಯಲ್ಲಿ ಪಾಲ್ಗೊಳ್ಳುವುದನ್ನು ಮಾಡಬಾರದು. ಡಾ.ಜಿ.ವಿ.ಜಯಣ್ಣ ನಿರ್ದೇಶಕ, Aಪಶು ಸಂಗೋಪನಾ ಇಲಾಖೆ