ಸೆಸ್ಕ್ ಗ್ರಾಹಕರ ಸಲಹಾ ಸಮಿತಿಗೆ ನಾಮನಿರ್ದೇಶನ

8KMD-2
ಗ್ರಾಹಕರ ಸಲಹಾ ಸಮಿತಿ ವಾಣಿಜ್ಯ ಪ್ರತಿನಿಧಿಯಾಗಿ ಮಾದರಹಳ್ಳಿ ಗ್ರಾಮದ ಕಾಂಗ್ರೆಸ್ ಮುಖಂಡ ಶಿವರಾಮು ಅವರಿಗೆ ಶಾಸಕ ಕದಲೂರು ಉದಯ್ ಆದೇಶ ಪತ್ರ ವಿತರಿಸಿದರು.
Published on

ಕೆ.ಎಂ.ದೊಡ್ಡಿ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಮದ್ದೂರು ತಾಲೂಕು ಮಟ್ಟದ ವಿದ್ಯುತ್ ಸಂಬಂಧಿದ ಸಮಸ್ಯೆಗಳನ್ನು ಬಗೆಹರಿಸಲು ಉಪ ವಿಭಾಗದ ಗ್ರಾಹಕರ ಸಲಹಾ ಸಮಿತಿಯ ವಾಣಿಜ್ಯ ಪ್ರತಿನಿಧಿಯಾಗಿ ಮಾದರಹಳ್ಳಿ ಗ್ರಾಮದ ಕಾಂಗ್ರೆಸ್ ಮುಖಂಡ ಶಿವರಾಮು ನಾಮನಿರ್ದೇಶಿತರಾಗಿದ್ದಾರೆ.

ಮದ್ದೂರು ಕ್ಷೇತ್ರದ ಶಾಸಕ ಕಲದಲೂರು ಉದಯ್ ಅವರ ಶಿಫಾರಸ್ಸಿನ ಮೇರೆಗೆ ರಾಜ್ಯ ಸರ್ಕಾರದ ಇಂಧನ ಸಚಿವಾಲಯ ಹಾಗೂ ಸೆಸ್ಕ್ ವತಿಯಿಂದ ಶಿವರಾಮು ಅವರನ್ನು ಉಪ ವಿಭಾಗದ ಗ್ರಾಹಕರ ಸಲಹಾ ಸಮಿತಿಯ ವಾಣಿಜ್ಯ ಪತ್ರಿನಿಧಿಯಾಗಿ ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿದ್ದಾರೆ.

ನೂತನ ಸದಸ್ಯರಿಗೆ ಶಾಸಕ ಕದಲೂರು ಉದಯ್ ಆದೇಶ ಪತ್ರ ವಿತರಿಸಿ ಉತ್ತಮವಾಗಿ ಜನಪರವಾಗಿ ಕಾರ್ಯ ನಿರ್ವಹಿಸುವಂತೆ ಸಲಹೆ ನೀಡಿ ಶುಭ ಹಾರೈಸಿದರು. ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ರಾಜೀವ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಸವರಾಜು, ಮುಖಂಡರಾದ ಕೆ.ಕೆಂಪೇಗೌಡ, ಚನ್ನಶೇಖರ್, ಗ್ರಾಪಂ ಸದಸ್ಯ ಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net