ಪ್ರವಾಸೋದ್ಯಮದಲ್ಲಿ 793 ಕೋಟಿ ರೂ. ಹೂಡಿಕೆ ಯೋಜನೆಗಳಿಗೆ ಅಸ್ತು: ಸಚಿವ ಎಚ್.ಕೆ.ಪಾಟೀಲ | Transaction advisor appointed for ropeway

hk PATIL
Published on

ಬೆಂಗಳೂರು: ರಾಜ್ಯದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ, ಹೆಚ್ಚೆಚ್ಚು ಪ್ರವಾಸಿಗರನ್ನು ಆಕರ್ಷಿಸುವುದು ಪ್ರವಾಸೋದ್ಯಮ ನೀತಿ ಉದ್ದೇಶವಾಗಿದೆ. ಈ ನೀತಿ ಪ್ರಕಾರ ಎರಡು ಮೆಗಾ ಸೇರಿ 28 ಪ್ರವಾಸೋದ್ಯಮ ಯೋಜನಾ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಮಾಹಿತಿ ನೀಡಿದರು.

ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಮಂಗಳವಾರ ಉನ್ನತಮಟ್ಟದ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಹಂಪಿ ಬಳಿ 99 ವಸತಿ ಕೊಠಡಿಗಳನ್ನು ಹೊಂದಿದ ದೊಡ್ಡ ಹೋಟೆಲ್ ನಿರ್ಮಾಣವು ಎರಡು ಮೆಗಾ ಯೋಜನೆಗಳಲ್ಲಿ ಸೇರಿದೆ.

ಅನುಮೋದಿತ 28 ಯೋಜನೆಗಳಡಿ 793 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದೆ. ನಾಲ್ಕು ಸಾವಿರ ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ. ಯೋಜನೆಯಡಿ ಪೂರ್ಣ ಪ್ರಮಾಣದ ಬಂಡವಾಳ ಹೂಡುವ ಖಾಸಗಿ ಸಂಸ್ಥೆಗಳಿಗೆ ನೀತಿ ಪ್ರಕಾರ ಪ್ರೋತ್ಸಾಹಕಧನ ಮತ್ತಿತರ ಸವಲತ್ತುಗಳನ್ನು ಸರ್ಕಾರ ನೀಡಲಿದೆ ಎಂದು ಎಚ್.ಕೆ.ಪಾಟೀಲ ತಿಳಿಸಿದರು.

ಬಜೆಟ್ ಹೋಟೆಲ್‌ಗಳಿಗೆ ಐದು ಕೋಟಿ ರೂ. ಬಂಡವಾಳ ಹೂಡಬೇಕಾಗುತ್ತದೆ. ಸರ್ಕಾರದಿಂದ ಶೇಕಡ 15ರಷ್ಟು ಅಥವಾ ಗರಿಷ್ಠ ಎರಡು ಕೋಟಿ ರೂ.ವರೆಗೆ ಸಹಾಯಧನ ಲಭಿಸಲಿದೆ. ಪ್ರೀಮಿಯಂ ಹೋಟೆಲ್‌ಗಳಿಗೆ 10 ಕೋಟಿ ರೂ. ಬಂಡವಾಳ ಹೂಡಿದರೆ ಸಬ್ಸಿಡಿ ಮೊತ್ತ ಶೇ.15 ಅಥವಾ ಗರಿಷ್ಠ ಐದು ಕೋಟಿ ರೂ.ಗಳಾಗಿದೆ ಎಂದು ವಿವರಿಸಿದರು.

ಉನ್ನತಮಟ್ಟದ ಮುಂದೆ ಪ್ರಾಥಮಿಕ ತೀರುವಳಿ ಮತ್ತು ನೋಂದಣಿ ಪ್ರಸ್ತಾವನೆಗಳಿಗೂ ಒಪ್ಪಿಗೆ ನೀಡಲಾಗಿದೆ. ಈ ಅರ್ಜಿಗಳು ಯಾವುದೇ ವರ್ಷದ್ದಾಗಿರಲಿ ಅನುಮತಿಯಂತೆ ಪ್ರವಾಸೋದ್ಯಮ ನೀತಿ ವ್ಯಾಪ್ತಿಗೆ ಒಳಪಡಲಿದ್ದು, ಪ್ರೋತ್ಸಾಹಕಧನ, ವಿನಾಯಿತಿ ಇನ್ನಿತರ ನೆರವು ಪಡೆಯಲು ಅರ್ಹವಾಗಿವೆ ಎಂದರು.

ವ್ಯವಹಾರಿಕ ಸಲಹೆಗಾರರ ನೇಮಕ

ರಾಜ್ಯದಲ್ಲಿ ಒಟ್ಟು 11 ರೋಪ್‌ವೇಗಳನ್ನು ನಿರ್ಮಿಸಲು ಸರ್ಕಾರ ತೀರ್ಮಾನಿಸಿದೆ. ಈ ಪೈಕಿ ಮೂರು ರೋಪ್‌ವೇ ಪ್ಯಾಕೇಜ್‌ಗಳಿಗೆ ವ್ಯವಹಾರಿಕ ಸಲಹೆಗಾರರನ್ನು ನೇಮಿಸಿ ಕೆಲಸದ ಆದೇಶ ನೀಡಲಾಗಿದೆ.

ತುಮಕೂರು ಜಿಲ್ಲೆಯ ಮಧುಗಿರಿ, ಕೊಡಗು ಜಿಲ್ಲೆಯ ಮಲ್ಲಳ್ಳಿ ಾಲ್ಸ್ ಮತ್ತು ಬೆಳಗಾವಿ ಜಿಲ್ಲೆಯ ಸವದತಿ ಯಲ್ಲಮ್ಮ ಪ್ಯಾಕೇಜ್‌ಗಳಿವು. ಮೂರು ಪ್ಯಾಕೇಜ್‌ಗಳಿಗೂ ವ್ಯವಹಾರಿಕ ಸಲಹೆಗಾರರಾಗಿ ರೈಟ್ಸ್ ಸಂಸ್ಥೆ ನೇಮಕವಾಗಿದೆ ಎಂದು ಹೇಳಿದರು.

ಪೂರ್ಣ ವಿವರಗಳೊಂದಿಗೆ ಮತ್ತೊಮ್ಮೆ ನಿಮ್ಮ (ಮಾಧ್ಯಮ ಪ್ರತಿನಿಧಿಗಳು) ಮುಂದೆ ಬರುವೆ ಎಂದ ಎಚ್.ಕೆ.ಪಾಟೀಲ, ಮೈಕ್ರೋ ೈನಾನ್ಸ್‌ಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲು ನಯವಾಗಿ ನಿರಾಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net