

Patna: ದೇಶ್ಯಾದ್ಯಂತ ಎರಡನೇ ಹಂತದಲ್ಲಿ ನಡೆಯಲಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಚುನಾವಣಾ ಆಯೋಗದ ಘೋಷಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಜನ್ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಪಿಕೆ, ಬಿಜೆಪಿ ಏನೇ ಮಾಡಿದರೂ, ಜನರು ಒಂದು ಪಕ್ಷದ ವಿರುದ್ಧ ಬೇಸರಗೊಂಡರೆ, ಅದನ್ನು ಸರಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಬಿಹಾರದಲ್ಲಿ SIR ಪ್ರಕ್ರಿಯೆ ನಡೆಸಲಾಯಿತು, ಅದರಿಂದ ಸಾಧಿಸಿಸದ್ದೇನು..?,ಯಾರ ಹೆಸೆರನ್ನಾದರು ತೆಗೆದು ಹಾಕಲಾಯಿತೇ..? ಇದರಿಂದಾಗಿ ಅನೇಕ ಜನರು ಸಂಕಷ್ಟಗಳನ್ನು ಎದುರಿಸುವಂತಾತಯಿತು. ಬಿಜೆಪಿ ಏನೇ ಪ್ರಯತ್ನ ಮಾಡಲಿ, ಯಾರೊಬ್ಬರ ಹೆಸರನ್ನು ಅಳಿಸಿ ಹಾಕಲು, ಬೇರೆಯವರನ್ನು ಹೆದರಿಸಲು ಮತ್ತು ಯಾರಿಗಾದರು ತೊಂದರೆ ನೀಡಲು ಯೋಚಿಸಬಹುದು. ಆದರೆ, ಜನರು ಒಮ್ಮೆ ನಿಮ್ಮ ವಿರುದ್ಧ ತಿರುಗಿ ಬಿದ್ದರೆ, ಯಾವುದೇ SIR ಅಥವಾ FIR ತಂದರೂ, ನಿಮ್ಮನ್ನು ಅದರಿಂದ ಬಚಾವ್ ಮಾಡಲು ಯಾರೂ ಇರುವುದಿಲ್ಲ ಎಂದರು.
ಭಾರತದ ಚುನಾವಣಾ ಆಯೋಗವು (ECI) 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎರಡನೇ ಹಂತದ ವಿಶೇಷ ತೀವ್ರ ಪರಿಷ್ಕರಣೆಯನ್ನು ನಡೆಸಲಿದ್ದು, ಅಂತಿಮ ಮತದಾರರ ಪಟ್ಟಿಯನ್ನು ಫೆಬ್ರವರಿ 7, 2026 ರಂದು ಪ್ರಕಟಿಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಸೋಮವಾರ ಪ್ರಕಟಿಸಿದ ನಂತರ ಪ್ರಶಾಂತ್ ಕಿಶೋರ್ರಿಂದ ಈ ಹೇಳಿಕೆಗಳು ಹೊರಬಿದ್ದಿವೆ.
ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಇಸಿ ಜ್ಞಾನೇಶ್ ಕುಮಾರ್, ಈ ಪ್ರಕ್ರಿಯೆಯು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಛತ್ತೀಸ್ಗಢ, ಗೋವಾ, ಗುಜರಾತ್, ಕೇರಳ, ಲಕ್ಷದ್ವೀಪ, ಮಧ್ಯಪ್ರದೇಶ, ಪುದುಚೇರಿ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳವನ್ನು ಒಳಗೊಂಡಿದೆ ಎಂದು ಹೇಳಿದರು.
ಪೌರತ್ವ ಕಾಯ್ದೆಯಡಿಯಲ್ಲಿ ಅಸ್ಸಾಂ ರಾಜ್ಯವು ಪ್ರತ್ಯೇಕ ನಿಬಂಧನೆಗಳನ್ನು ಒಳಗೊಂಡಿರುವುದರಿಂದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ ಪ್ರತ್ಯೇಕ ಆದೇಶಗಳನ್ನು ನೀಡಲಾಗುವುದು ಎಂದು ಸಿಇಸಿ ಜ್ಞಾನೇಶ್ ಕುಮಾರ್ಹೇಳಿದರು. ಭಾರತದ ಪೌರತ್ವ ಕಾಯ್ದೆಯಡಿಯಲ್ಲಿ, ಅಸ್ಸಾಂಗೆ ಪ್ರತ್ಯೇಕ ನಿಬಂಧನೆಗಳಿವೆ. ಸುಪ್ರೀಂ ಕೋರ್ಟ್ನ ಮೇಲ್ವಿಚಾರಣೆಯಲ್ಲಿ, ಅಲ್ಲಿನ ಪೌರತ್ವ ಪರಿಶೀಲನೆ ಪೂರ್ಣಗೊಳ್ಳಲಿದೆ. ಜೂನ್ 24 ರ ಎಸ್ಐಆರ್ ಆದೇಶವು ಇಡೀ ದೇಶಕ್ಕೆ ಅನ್ವಯಿಸುತ್ತಿತ್ತು. ಅಂತಹ ಸಂದರ್ಭಗಳಲ್ಲಿ, ಇದು ಅಸ್ಸಾಂಗೆ ಅನ್ವಯಿಸುತ್ತಿರಲಿಲ್ಲ. ಆದ್ದರಿಂದ, ಅಸ್ಸಾಂಗೆ ಪರಿಷ್ಕರಣೆಗೆ ಪ್ರತ್ಯೇಕ ಆದೇಶಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.
1955 ರ ಪೌರತ್ವ ಕಾಯ್ದೆಯ ಸೆಕ್ಷನ್ 6A, ಅಸ್ಸಾಂ ಒಪ್ಪಂದದಿಂದ ಒಳಗೊಳ್ಳಲ್ಪಟ್ಟ ಪೌರತ್ವಕ್ಕಾಗಿ ವಿಶೇಷ ನಿಬಂಧನೆಗಳನ್ನು ಒದಗಿಸುತ್ತದೆ. ಸುಪ್ರೀಂ ಕೋರ್ಟ್ನ ನಿರ್ದೇಶನಗಳನ್ನು ಅನುಸರಿಸಿ, ಬಿಹಾರದಲ್ಲಿ SIR ಗೆ ಸಂಬಂಧಿಸಿದ ಸೆಪ್ಟೆಂಬರ್ 9 ರ ಆದೇಶದ ಪ್ರಕಾರ, ECI ಆಧಾರ್ ಅನ್ನು 12 ಸೂಚಕ ದಾಖಲೆಗಳ ಪಟ್ಟಿಯಲ್ಲಿ ಸೇರಿಸಿದೆ.
ಬಿಹಾರದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಸೆಪ್ಟೆಂಬರ್ನಲ್ಲಿ ಮೊದಲ ಹಂತದ ಎಸ್ಐಆರ್ ನಡೆಸಲಾಯಿತು.(ಏಜೆನ್ಸೀಸ್)