ಒಬ್ಬರೂ ಸೋಂಕಿತರಿಲ್ಲದ ರಾಜ್ಯಗಳು ಯಾವುವು ಗೊತ್ತೆ? ಇಲ್ಲಿದೆ ರಾಜ್ಯವಾರು ಕೋವಿಡ್​-19 ಪೀಡಿತರ ವಿವರ

state tally- corona
Published on

ನವದೆಹಲಿ: ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ 10 ಸಾವಿರ ದಾಟಿದ್ದು, ಮೃತರ ಸಂಖ್ಯೆ 358ಕ್ಕೆ ಏರಿಕೆಯಾಗಿದೆ. ಒಟ್ಟು ಸೋಂಕಿತರ ಪೈಕಿ 1,181 ಜನರು ಗುಣಮುಖರಾಗಿದ್ದು, 8,914 ಪ್ರಕರಣಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ರಾಜ್ಯವಾರು ಅಂಕಿ-ಸಂಖ್ಯೆಗಳನ್ನು ಗಮನಿಸುವುದಾದರೆ, ಮಹಾರಾಷ್ಟ್ರದಲ್ಲಿ ಒಟ್ಟು 2,334 ಪ್ರಕರಣಗಳಿದ್ದು, ಈವರೆಗೆ 160 ಜನರು ಮೃತಪಟ್ಟಿದ್ದಾರೆ. 217 ಜನರು ಚೇತರಿಸಿಕೊಂಡಿದ್ದಾರೆ. ದೆಹಲಿ ನಂತರದ ಸ್ಥಾನದಲ್ಲಿದ್ದು, ಇಲ್ಲಿ 1500ಕ್ಕೂ ಹೆಚ್ಚು ಸೋಂಕಿತರಿದ್ದು, 28 ಜನರು ಮೃತಪಟ್ಟಿದ್ದಾರೆ.

ತಮಿಳುನಾಡು: 1173 ಸೋಂಕಿತರು, 11 ಸಾವು, 58 ಚೇತರಿಕೆ

ರಾಜಸ್ಥಾನ: 873 ಪ್ರಕರಣಗಳು, 3 ಸಾವು, 21 ಗುಣಮುಖ

ಮಧ್ಯಪ್ರದೇಶ: 604 ಸೋಂಕಿತರು, 43 ಮರಣ

ತೆಲಂಗಾಣ: 562 ಪ್ರಕರಣಗಳು, 15 ಸಾವು, 100 ಗುಣಮುಖ

ಉತ್ತರಪ್ರದೇಶ: 558 ಕೇಸ್​ಗಳು, 5 ಸಾವು, 49 ಜನರ ಚೇತರಿಕೆ

ಗುಜರಾತ್​: 539, 26 ಸಾವು, 54 ಜನರ ಚೇತರಿಕೆ

ಆಂಧ್ರಪ್ರದೇಶ: 432 ಪ್ರಕರಣಗಳು, 7 ಸಾವು, 11 ಗುಣಮುಖ

ಕೇರಳ: 379 ಕೇಸ್​ಗಳು, 3 ಸಾವು, 198 ಜನರ ಗುಣವಾಗಿದ್ದಾರೆ.

ಕರ್ನಾಟಕ: 249 ಸೋಂಕಿತರು, 8 ಸಾವು, 59 ಜನರ ಚೇತರಿಕೆ

ಜಮ್ಮು ಮತ್ತು ಕಾಶ್ಮೀರ: 270 ಪ್ರಕರಣಗಳು, 4 ಸಾವು, 16 ಗುಣಮುಖ

ಹರಿಯಾಣ: 185 ಸೋಕಿತರು, 3 ಮರಣ, 29 ಜನರು ಚೇತರಿಕೆ

ಪಂಜಾಬ್​: 167 ಕೇಸ್​ಗಳು, 11 ಸಾವು, 14 ಚೇತರಿಕೆ

ಪಶ್ಚಿಮ ಬಂಗಾಳ: 190 ಸೋಂಕಿತರು, 7 ಸಾವು, 36 ಜನರ ಚೇತರಿಕೆ

ಒಡಿಶಾ: 54 ಕೇಸ್​ಗಳು, 1 ಸಾವು, 12 ಜನರು ಗುಣಮುಖ

ಬಿಹಾರ: 65 ಪಾಸಿಟಿವ್​, ಒಬ್ಬರ ಮರಣ, 26 ಚೇತರಿಕೆ

ಹಿಮಾಚಲಪ್ರದೇಶ: 32 ಕೇಸ್​ಗಳು, 1 ಸಾವು, 13 ಚೇತರಿಕೆ

ಉತ್ತರಾಖಂಡ: 35 ಪ್ರಕರಣಗಳು, 5 ಚೇತರಿಕೆ

ಚತ್ತೀಸ್​ಗಢ್​: 31 ರಲ್ಲಿ 10ಜನರು ಗುಣಮುಖ

ಅಸ್ಸಾಂ: 29 ಸೋಂಕಿತರು, 1 ಸಾವು

ಜಾರ್ಖಂಡ್​: 24 ಪ್ರಕರಣಗಳು, 2 ಸಾವು

ಚಂಡಿಗಢ್​: 21 ಕೇಸ್​ಗಳು, 7 ಗುಣಮುಖ

ಅಂಡಮಾನ್​: 11 ಕೇಸ್​ಗಳು, 10 ಚೇತರಿಕೆ

ಲಡಾಕ್​: 15ರಲ್ಲಿ 10 ಜನರು ಚೇತರಿಸಿಕೊಂಡಿದ್ದಾರೆ. ಪುದುಚೇರಿಯಲ್ಲಿ 7, ಮಣಿಪುರದಲ್ಲಿ 2, ತ್ರಿಪುರದಲ್ಲಿ 2 ಪ್ರಕರಣಗಳು ವರದಿಯಾಗಿವೆ. ಅರುಣಾಚಲಪ್ರದೇಶ, ಮಿಜೋರಾಂ, ನಾಗಾಲ್ಯಾಂಡ್​ಗಳಲ್ಲಿ ತಲಾ ಒಂದೊಂದು ಪ್ರಕರಣಗಳು ಕಂಡುಬಂದಿವೆ. ಸಿಕ್ಕಿಂ ಹಾಗೂ ಮೇಘಾಲಯದಲ್ಲಿ ಈವರೆಗೆ ಒಬ್ಬರೂ ಸೋಂಕಿಗೆ ಒಳಗಾಗಿಲ್ಲ.

No single corona case in many states

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net