ಇನ್ಮುಂದೆ ಗ್ರೇಸ್ ಮಾರ್ಕ್ ಕೊಡಲ್ಲ; ಶಿಕ್ಷಣ ಸಚಿವರ ಪುನರುಚ್ಚಾರ

Education minister Madhu bangarappa
ಶಿಕ್ಷಣ ಸಚಿವ ಮಧು ಬಂಗಾರಪ್ಪ
Published on

ಬೆಂಗಳೂರು: ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರಿಕ್ಷೆಯಲ್ಲಿ ಗರಿಷ್ಠ ಪ್ರಮಾಣದ ಗ್ರೇಸ್ ಮಾರ್ಕ್ ನೀಡಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ಶಿಕ್ಷಣ ಇಲಾಖೆ ಈ ವಿಚಾರದಲ್ಲಿ ಮಹತ್ವದ ತೀರ್ಮಾನ ಪ್ರಕಟಿಸಿದೆ.
ನಾವು ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ ಕೊಡಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ.
ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮದೇ ನ್ಯೂನ್ಯತೆ ಇಟ್ಟುಕೊಂಡು ಪರೀಕ್ಷೆಯಲ್ಲಿ ಬಿಗಿ ಮಾಡಲಾಗುತ್ತಿರಲಿಲ್ಲ. ಕಳೆದ ಬಾರಿಯಿಂದ ಬಿಗಿಯಾದ ಕ್ರಮಕೈಗೊಂಡಿದ್ದಾರೆ. ಇದೀಗ ಮೂರು ಪರೀಕ್ಷೆ ಆಯ್ಕೆ ಇರಲಿದೆ. ಪರೀಕ್ಷೆಯಲ್ಲಿ ಅನುತ್ತೀರ್ಣ ಆದವರೂ ಮತ್ತೆ ಪರೀಕ್ಷೆ ಎದುರಿಸಲು ಅವಕಾಶ ಸಿಗಲಿದೆ. ಯಾವ ವಿದ್ಯಾರ್ಥಿಯೂ ಹಿಂದೆ ಉಳಿಯುವುದಿಲ್ಲ ಎಂದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಾಪಿ ಹೊಡೆಯುವುದಕ್ಕೆ ಕಡಿವಾಣ ಹಾಕಿದ್ದೇವೆ. ಫಲಿತಾಂಶ ಕುಸಿತ ಆಗಿರಬಹುದು. ಆದರೆ, ನಮ್ಮ ಮಕ್ಕಳು ಎಲ್ಲಿದ್ದಾರೆ ಎಂಬುದನ್ನು ಅರಿತು ಗಟ್ಟಿಯಾದ ಶಿಕ್ಷಣ ಕೊಡಲು ಅನುಕೂಲ ಆಗಲಿದೆ ಎಂದು ಸಮಜಾಯಿಷಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net