

ಮುಂಬೈ: ತನ್ನ ಪ್ರಿಮೀಯಂ ಪೋನ್, ಐಪ್ಯಾಡ್ ಮತ್ತು ಇತರ ಅತ್ಯಾಧುನಿ ಉತ್ಪನ್ನಗಳಿಗೆ ಹೆಸರುವಾಸಿಯಾದ ಆ್ಯಪಲ್(Apple) ಕಂಪನಿ ಇದೀಗ ಸ್ಮಾರ್ಟ್ ಹೋಮ್ಗಳ ತಂತ್ರಜ್ಞಾನದ ಬಳಕೆಯಲ್ಲಿ ಹೊಸ ವಿಧಾನವೊಂದು ಸೃಷ್ಟಿಸುವ ಮೂಲಕ ಮಾರುಕಟ್ಟೆಯಲ್ಲಿ ದಾಪುಗಾಲಿಟ್ಟಿದೆ ಎಂದು ವರದಿಯಾಗಿದೆ.
ಹೌದು, ಪ್ರತಿ ಬಾರಿ ಆ್ಯಪಲ್ ಕಂಪನಿ ತಮ್ಮ ಪೋನ್ಗಳ ಹೊಸ ವಿನ್ಯಾಸ ಮತ್ತು ಹೊಸ ತಂತ್ರಜ್ಞಾನ ಬಳಸುವ ಮೂಲಕ ಗ್ರಾಹಕರನ್ನು ವಿಸ್ಮಯಗೊಳಿಸುತ್ತಿದೆ. ಆದರೆ, ಇದೀಗ ಮನೆಗಳನ್ನು ಸ್ಮಾರ್ಟ್ ಮಾಡಲು ಮನೆಗಳ ಬಾಗಿಲುಗಳಿಗೆ ಸಂಪ್ರಾದಾಯಕ ಕೀಗಳ ಬದಲಾಗಿ ತಂತ್ರಜ್ಞಾನ ಬಳಸಿಕೊಂಡು ಹೊಸ ವಿಧದ ಕೀ ಬಳಸಲು ಮುಂದಾಗಿದೆ.
2025ರ ವೇಳೆಗೆ ಕಂಪನಿಯೂ ತನ್ನ ಸುಧಾರಿತ ಮತ್ತು ಸುರಕ್ಷಿತ ಫೇಸ್ ಐಡಿ ತಂತ್ರಜ್ಞಾನ ಒಳಗೊಂಡಿರುವ ಅದ್ಭುತವಾದ ಸ್ಮಾರ್ಟ್ ಡೋರ್ ಲಾಕರ್(ಕ್ಯಾಮರಾ)ವನ್ನು ಆಳವಡಿಸುವ ನಿರೀಕ್ಷೆ ಇದೆ. ಈ ಬೆಳವಣಿಗೆ ಮನೆಯ ಭದ್ರತೆಯ ಬಗ್ಗೆ ಮರು ವ್ಯಾಖ್ಯಾನಿಸಲಾಗಿದೆ. ಶೀಘ್ರದಲ್ಲಿಯೇ ಮನೆಯ ಪ್ರವೇಶ ದ್ವಾರದಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಹೇಳಲಾಗುತ್ತಿದೆ. ಆ್ಯಪಲ್ ಲಾಂಚ್ ಮಾಡುವ ಫೇಸ್ ಡೋರ್ ಲಾಕರ್, ಮನೆಯ ಮಾಲೀಕರನ್ನು ಗುರುತಿಸಿ ಒಳಗೆ ಬೀಡುತ್ತದೆ. ಅಲ್ಲದೆ, ಇದು ಮನೆಯ ಭದ್ರತಾದೃಷ್ಠಿಯಿಂದ ಉತ್ತಮ ಉಪಯೋಗ ಎಂದು ಹಲವರ ಅಭಿಪ್ರಾಯವಾಗಿದೆ.
ಇನ್ನು ಆ್ಯಪಲ್ ಫೇಸ್ ಡೋರ್ ಲಾಕರ್ಗಳಲ್ಲಿ ಅತ್ಯಾಧುನಿ ತಂತ್ರಜ್ಞಾನ ಬಳಕೆಯಿಂದಾಗಿ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತವೆ. ಮನೆಯ ಪ್ರವೇಶದ್ವಾರದಲ್ಲಿ ಆಳವಡಿಸಿಕೊಳ್ಳುವ ಫೇಸ್ ಲಾಕರ್, ಮನೆ ಮಂದಿಯನ್ನು ಬಿಟ್ಟು ಮನೆಯೊಳಗೆ ಹೋಗಲು ಯಾರಿಗೂ ಪ್ರವೇಶ ನೀಡುವುದಿಲ್ಲ. ಅಲ್ಲದೆ, ಬೇರೆಯವರೂ ಮನೆಯೊಳಗೆ ಬರಬೇಕಾದರೆ ಮನೆಯ ಮಾಲೀಕರ ಅಗತ್ಯವಿದೆ. ಮನೆಯ ಮಾಲೀಕರು ಲಾಕರ್ನಲ್ಲಿ ಕೆಲ ಬದಲಾವಣೆ ಮಾಡುವ ಮೂಲಕ ಬೇರೆಯವರನ್ನು ಒಳಗೆ ಕರೆದುಕೊಳ್ಳಬಹುದು. ಇಲ್ಲವಾದರೆ ಬೇರೆಯವರಿಗೆ ಖಡಖಂಡಿತ ನಿರ್ಬಂಧ ಗ್ಯಾರಂಟಿ ಎಂದು ಸಾಧನದ ತಂತ್ರಜ್ಞಾನದ ಬಗ್ಗೆ ವರದಿಗಳು ಉಲ್ಲೇಖಿಸಿವೆ.
ಮನೆಗೆ ಫೇಸ್ ಲಾಕರ್ ಆಳವಡಿಸುವುದರಿಂದ ಮನೆ ಮಂದಿಯಲ್ಲ ಮನೆಯಿಂದ ನಿಚಿಂತೆಯಿಂದ ಹೊರ ಹೋಗಬಹುದು. ಕಳ್ಳ ಕಾಟ ಇರುವುದಿಲ್ಲ. ಒಂದು ಮನೆಗೆ ಕಳ್ಳರು ನುಗ್ಗಿದರೆ ನಿಮ್ಮ ಸ್ಮಾರ್ಟ್ಪೋನ್ಗೆ ಕಳ್ಳರ ಪೋಟೋ ಸಮೇತ ಮಾಹಿತಿ ಕ್ಷಣದಲ್ಲಿ ಬರುತ್ತದೆ. ಅಲ್ಲದೆ, ಭದ್ರತಾ ಸಿಬ್ಬಂದಿ ನಿಯೋಜಿಸುವ ಅಗತ್ಯ ಇಲ್ಲ. ಇನ್ಮುಂದೆ ಮನೆಮುಂದೆ ನಾಯಿ ಇದೆ ಎಂದು ಎಚ್ಚರಿಕೆಯ ಬೋರ್ಡ್ ಹಾಕುವ ಅಗತ್ಯತೆ ಇರುವುದಿಲ್ಲ.
ಆ್ಯಪಲ್ ತನ್ನ ಹೊಸ ಮಾನದಂಡಗಳ ಮೂಲಕ ಸ್ಮಾರ್ಟ್ ಹೋಮ್ ಆಖಾಡಕ್ಕೆ ಇಳಿಯುತ್ತಿದ್ದು, ಮುಂದಿನ ದಿನಗಳಲ್ಲಿ ತನ್ನ ವ್ಯಾಪ್ತಿಯನ್ನು ಸ್ಮಾರ್ಟ್ ಹೋಮ್ ಮಾರುಕಟ್ಟೆಯಲ್ಲಿ ವಿಸ್ತರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ,(ಏಜೆನ್ಸೀಸ್).