

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚು ಕರೊನಾ ಪ್ರಕರಣಗಳು ಬೆಳಕಿಗೆ ಬರುವ ಕಡೆ ಸೀಲ್ಡೌನ್ ಮಾಡಲಾಗುತ್ತದೆಯೇ ಹೊರತು ಲಾಕ್ಡೌನ್ ಮತ್ತೆ ಜಾರಿಗೊಳಿಸುವ ಯಾವುದೇ ಉದ್ದೇಶವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಬೆಂಗಳೂರಿಗೆ ಸಂಬಂಧಪಟ್ಟ ಸಚಿವರು, ಶಾಸಕರು, ಸಂಸದರೊಂದಿಗೆ ಶುಕ್ರವಾರ ಸಭೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಕಂದಾಯ ಸಚಿವ ಆರ್.ಅಶೋಕ್, ಅನಿವಾರ್ಯ ಸಂದರ್ಭದಲ್ಲಿ ಸರ್ಕಾರ ಕೈಗೊಂಡ ಕ್ರಮಗಳು ಮತ್ತು ಮುಂದಿನ ದಾರಿಯ ಕುರಿತು ವಿಚಾರ ವಿನಿಮಯ ನಡೆಸಿದರು.
ಮತ್ತೆ ಲಾಕ್ಡೌನ್ ಪ್ರಶ್ನೆಯೇ ಇಲ್ಲ ಎಂಬ ಸರ್ಕಾರದ ಸ್ಪಷ್ಟನೆಗೆ ಪ್ರತಿಕ್ರಿಯಿಸಿದ ಪ್ರತಿಪಕ್ಷದ ಶಾಸಕರು, ಸರ್ಕಾರದ ತೀರ್ವನಕ್ಕೆ ಬದ್ಧ ಎಂದು ಘೋಷಿಸಿದರು. ಸಭೆಯಲ್ಲಿ ಮಾತನಾಡಿದ ಸಿಎಂ, ಬೆಂಗಳೂರಿನಲ್ಲಿ ಸೋಂಕು ತೀವ್ರಗತಿ ಏರಿಕೆಯಾಗುತ್ತಿದೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೇವೆ. ಪರಿಸ್ಥಿತಿ ನಿಯಂತ್ರಣಕ್ಕೆ ಎಲ್ಲರೂ ಸೇರಿ ಶಕ್ತಿಮೀರಿ ಪ್ರಯತ್ನ ಮಾಡಬೇಕಿದೆ. ಇಲ್ಲಿ ರಾಜಕಾರಣದ ಮಾತು ಇಲ್ಲ ಎಂದರು.
ಮುಂದಿನ ಒಂದು ತಿಂಗಳಲ್ಲಿ ಪ್ರಕರಣಗಳ ನಿರ್ವಹಣೆಗೆ ತಾತ್ಕಾಲಿಕ ಮತ್ತು ದೂರದೃಷ್ಟಿಯ ಕ್ರಮ ರೂಪಿಸಬೇಕಿದೆ. ಜನರ ಹಿತಾಸಕ್ತಿಯ ದೃಷ್ಟಿಯಿಂದ ಮುಕ್ತವಾಗಿ ರ್ಚಚಿಸಿ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸೋಣ. ಈ ನಿಟ್ಟಿನಲ್ಲಿ ಮುಕ್ತವಾದ ಸಲಹೆಗಳನ್ನು ಕೊಡಿ, ಯಾವುದೇ ಸಂಕೋಚ ಮಾಡಿಕೊಳ್ಳಬೇಡಿ ಎಂದು ಸಿಎಂ ಮನವಿ ಮಾಡಿದರು. ಸಭೆ ಬಳಿಕ ಮಾಧ್ಯಮಗಳಿಗೆ ವಿವರಣೆ ನೀಡಿದ ಕಂದಾಯ ಸಚಿವ ಆರ್.ಅಶೋಕ್, ಕರೊನಾ ನಿಯಂತ್ರಣಕ್ಕೆ ಶಾಸಕರು ಹಲವು ಸಲಹೆಗಳನ್ನು ಕೊಟ್ಟಿದ್ದಾರೆ. ಅದನ್ನು ಜಾರಿಗೆ ತರುತ್ತೇವೆ. ಕಾರ್ಪೆರೇಷನ್ನ ಪ್ರತಿ ವಾರ್ಡ್ಗೆ 25 ಲಕ್ಷ ರೂ. ಮೀಸಲಿಡಲಾಗುತ್ತದೆ. ಅಲ್ಲಿನ ಜನರ ಆರೋಗ್ಯಕ್ಕಾಗಿ ಹಣವನ್ನು ಬಳಸಲಾಗುತ್ತದೆ ಎಂದರು. ಸರ್ಕಾರದ ತೀರ್ಮಾನ
ಕಾಂಗ್ರೆಸ್ ಸಲಹೆಗಳು