ಅತಿಥಿ ಶಿಕ್ಷಕರಿಗಿಲ್ಲ ಗೌರವಧನ

untitled-design-4-689e2c43aaff3
Published on

ಬೆಂಗಳೂರು: ಅತಿಥಿ ಶಿಕ್ಷಕರಿಗೆ ವರ್ಷಕ್ಕೆ ಎರಡು ಬಾರಿ ಗೌರವಧನ ಪಾವತಿ ಮಾಡುತ್ತಿದ್ದು, ಅವರು ಜೀವನ ನಡೆಸುವುದು ಕಷ್ಟಕರವಾಗುತ್ತಿದೆ ಎಂದು ಶಾಸಕ ಕೆ.ಗೋಪಾಲಯ್ಯ ದೂರಿದರು. ವಿಧಾನಸಭೆ ಅಧಿವೇಶನದಲ್ಲಿ, ಕಳೆದ ಎರಡೂವರೆ ತಿಂಗಳಿಂದ ಗೌರವಧನ ಪಾವತಿ ಆಗಿಲ್ಲ. 12 ಸಾವಿರ ರೂ. ನೀಡುತ್ತಿದ್ದು, ಜೀವನ ನಡೆಸಲು ಪರದಾಟ ನಡೆಸುವಂತಾಗಿದೆ.

ಹಾಗಾಗಿ ಕನಿಷ್ಠ 18 ಸಾವಿರ ರೂ. ಗೌರವಧನ ನೀಡಬೇಕೆಂದು ಆಗ್ರಹಿಸಿದರು. ಎಲ್​ಕೆಜಿ, ಯುಕೆಜಿ ಶುರುವಾದ ಬಳಿಕ ಒಂದೊಂದು ಶಾಲೆಗೆ 100 ರಿಂದ 150 ವಿದ್ಯಾರ್ಥಿಗಳು ನೋಂದಣಿ ಆಗಿದ್ದಾರೆ. ಅವರಿಗೆ ಸರಿಯಾದ ಊಟ ಕೊಡಲು ಸರ್ಕಾರದಿಂದ ಆಗುತ್ತಿಲ್ಲ. 100 ಮಕ್ಕಳಿದ್ದರೂ 30 ಮಕ್ಕಳಿಗೆ ಮಾತ್ರ ವಿತರಿಸಲಾಗುತ್ತಿದೆ ಎಂದು ದೂರಿದರು.

ಶಿಕ್ಷಣ ಸಚಿವರ ಪರವಾಗಿ ಉತ್ತರಿಸಿದ ಸಚಿವ ಬೈರತಿ ಸುರೇಶ್, ಸರ್ಕಾರ ಬಂದ ಮೇಲೆ ಅತಿಥಿ ಶಿಕ್ಷಕರ ಗೌರವಧನ ತಲಾ ಎರಡು ಸಾವಿರ ರೂ. ಹೆಚ್ಚಳ ಮಾಡಲಾಗಿದೆ. ಹಾಲಿ 34 ಸಾವಿರ ಅತಿಥಿ ಶಿಕ್ಷಕರಿದ್ದು, 2023-24ನೇ ಸಾಲಿನಲ್ಲಿ 13 ಸಾವಿರ ಶಿಕ್ಷಕರ ನೇಮಕಾತಿ ಆಗಿದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಊಟ ಪೂರೈಕೆ ಮಾಡುತ್ತಿದ್ದು ಶಿಕ್ಷಕರ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ವಿಶೇಷ ಗಮನಹರಿಸಲಿದೆ ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net