ಹಳೇ ಮಂಡ್ಲಿ ಬಳಿ ಗ್ಯಾಸ್ ಉತ್ಪಾದನಾ ಘಟಕ ಬೇಡ

protest
ಅನಿಲ ಉತ್ಪಾದನಾ ಘಟಕ ನಿರ್ಮಾಣ ವಿರೋಧಿಸಿ ಹಳೇ ಮಂಡ್ಲಿ ನಾಗರಿಕರಾದ ಮುನಾವರ್ ಪಾಶಾ, ವಸೀಂ ಖಾನ್, ಅಫ್ತರ್ ಪಾಶಾ ಮುಂತಾದವರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Published on

ಶಿವಮೊಗ್ಗ: ನಗರದ ಹಳೇ ಮಂಡ್ಲಿ ಬಳಿ ಅನಿಲ ಉತ್ಪಾದನಾ ಘಟಕದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇಲ್ಲಿ ಘಟಕ ಕಾರ್ಯನಿರ್ವಹಿಸುವುದರಿಂದ ಸುತ್ತಮುತ್ತಲಿನ ನಿವಾಸಿಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ. ಹೀಗಾಗಿ ಘಟಕ ಸ್ಥಾಪನೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಮುಸ್ಲಿಮ್ಸ್ ಎಸ್ಸಿ, ಎಸ್ಟಿ ಮತ್ತು ಓಬಿಸಿ ಡೆವಲಪ್‌ಮೆಂಟ್ ೆರಂ ನೇತೃತ್ವದಲ್ಲಿ ಗುರುವಾರ ಸ್ಥಳೀಯರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ವಾರ್ಡ್ ನಂ.31, 33ರ ಹಳೇ ಮಂಡ್ಲಿ ಸಮೀಪ ಖಾಸಗಿ ಸಂಸ್ಥೆಯವರು ಅನಿಲ ಉತ್ಪಾದನಾ ಘಟಕ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ಪ್ರದೇಶದ ಸುತ್ತಲೂ ಸುಮಾರು ನಾಲ್ಕು ಸಾವಿರ ಮನೆಗಳಿವೆ. ಶಾಲೆ, ಅಂಗನವಾಡಿ, ಆಸ್ಪತ್ರೆ ಸಹ ಇವೆ. ಈ ಘಟಕದಿಂದ ಹೊರಬರುವ ರಾಸಾಯನಿಕದಿಂದ ಉಸಿರಾಟದ ಸಮಸ್ಯೆ ಉಂಟಾಗಲಿದೆ ಎಮದು ಆತಂಕ ವ್ಯಕ್ತಪಡಿಸಿದರು.
ಈ ಘಟಕವನ್ನು ವಿರೋಧಿಸಿ ಕೆಲವು ತಿಂಗಳ ಹಿಂದೆಯೇ ಮನವಿ ಮಾಡಿದ್ದೆವು. ಆದರೆ ಘಟಕದ ಸ್ಥಳಾಂತರಕ್ಕೆ ಜಿಲ್ಲಾಡಳಿತ ಆದೇಶ ನೀಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದನ್ನು ಗಂಭೀರವಾಗಿ ಪರಿಗಣಿಸಿ ಘಟಕದ ಸ್ಥಳಾಂತರಕ್ಕೆ ಜಿಲ್ಲಾಡಳಿತ ಆದೇಶ ನೀಡಬೇಕೆಂದು ಆಗ್ರಹಿಸಿದರು. ಸ್ಥಳೀಯರಾದ ಮಹ್ಮದ್ ವಸೀಕ್, ಮುನಾವರ್ ಪಾಶಾ, ವಸೀಂ ಖಾನ್, ಪಾಷಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net