ಕರೊನಾ ವೈರಸ್​ ರೋಗಿಗಳಿಗೆ ಚಿಕಿತ್ಸೆ ನೀಡುತ್ತ, ಅದೇ ಸೋಂಕಿಗೆ ಬಲಿಯಾದರಾ ದೆಹಲಿಯ ಈ ವೈದ್ಯ? ಫ್ಯಾಕ್ಟ್​ಚೆಕ್​​ನಲ್ಲಿ ಬಯಲಾಗಿದ್ದು ಶಾಕಿಂಗ್​ ಸತ್ಯ...!

Untitled
Published on

ನವದೆಹಲಿ: ಕರೊನಾ ವೈರಸ್​ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ. ಒಂದೆಡೆ ಕರೊನಾ ವೈರಸ್​ನಿಂದ ಹಲವರು ಸಾಯುತ್ತಿದ್ದರೆ, ಮತ್ತೊಂದೆಡೆ ರೋಗಿಗಳಿಗೆ ಚಿಕಿತ್ಸೆ ನೀಡಿ, ಅದೇ ಸೋಂಕಿನಿಂದ ಕೆಲವು ವೈದ್ಯರೂ ಮೃತಪಟ್ಟಿದ್ದಾರೆ.

ನವದೆಹಲಿ: ಕರೊನಾ ವೈರಸ್​ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ. ಒಂದೆಡೆ ಕರೊನಾ ವೈರಸ್​ನಿಂದ ಹಲವರು ಸಾಯುತ್ತಿದ್ದರೆ, ಮತ್ತೊಂದೆಡೆ ರೋಗಿಗಳಿಗೆ ಚಿಕಿತ್ಸೆ ನೀಡಿ, ಅದೇ ಸೋಂಕಿನಿಂದ ಕೆಲವು ವೈದ್ಯರೂ ಮೃತಪಟ್ಟಿದ್ದಾರೆ.

ಹಾಗೇ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಓರ್ವ ವೈದ್ಯನ ಫೋಟೋ ವೈರಲ್​ ಆಗಿತ್ತು. ಕುತ್ತಿಗೆಗೆ ಸ್ಟೆತೋಸ್ಕೋಪ್​ ಹಾಕಿಕೊಂಡು, ಬಿಳಿ ಕೋಟ್​ ಧರಿಸಿ ನಿಂತಿದ್ದ ವೈದ್ಯನ ಫೋಟೋ ವೈರಲ್​ ಆಗುವ ಜತೆ, ಇವರ ಹೆಸರು, ಉಸ್ಮಾನ್​ ರಿಯಾಜ್​. ದೆಹಲಿಯ ಆಸ್ಪತ್ರೆಯೊಂದರಲ್ಲಿ ವೈದ್ಯರು. ಹಲವು ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡಿ, ಅವರ ಪ್ರಾಣ ಉಳಿಸಿದ್ದಾರೆ. ಆದರೆ ಬಳಿಕ ವೈದ್ಯರಿಗೇ ಕರೊನಾ ವೈರಸ್​ ತಗುಲಿ ಮೃತಪಟ್ಟಿದ್ದಾರೆ ಎಂದು ಫೋಟೋದೊಂದಿಗೆ ವಿವರಣೆ ನೀಡಲಾಗಿತ್ತು.

ಅಲ್ಲದೆ, ಭಾರತದಲ್ಲಿ ಕರೊನಾಕ್ಕೆ ಬಲಿಯಾದ ಮೊದಲ ವೈದ್ಯ ಎಂದೂ ಹೇಳಲಾಗಿತ್ತು. ಆದರೆ ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಂ ನಡೆಸಿದ ಫ್ಯಾಕ್ಟ್​ಚೆಕ್​ನಲ್ಲಿ ಸತ್ಯ ಬಯಲಾಗಿದೆ.

ಡಾ. ರಿಯಾಜ್​ ಉಸ್ಮಾನ್​ ಸತ್ತೇ ಇಲ್ಲ. ಸದ್ಯ ಯುಎಇಯ ಆಸ್ಟರ್​ ಎಂಬ ಕ್ಲಿನಿಕ್​​ನಲ್ಲಿ ಜನರಲ್ ಪ್ರಾಕ್ಟೀಷನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಆಸ್ಟರ್​ ಕ್ಲಿನಿಕ್​ನಲ್ಲಿ ಈ ವೈದ್ಯ ಕೆಲಸ ಮಾಡುತ್ತಿರುವ ಬಗ್ಗೆ ಅದರ ವೆಬ್​ಸೈಟ್​ನಲ್ಲಿ ದಾಖಲೆಯಿದೆ. ರಿಯಾಜ್​ ಪ್ರೊಫೈಲ್, ಫೋಟೋಗಳೂ ಇವೆ.

ಅಷ್ಟೇ ಅಲ್ಲದೆ, ದೆಹಲಿಯಲ್ಲಿ ಯಾವ ವೈದ್ಯನೂ ಕರೊನಾ ವೈರಸ್​ನಿಂದ ಮೃತಪಟ್ಟ ಅಧಿಕೃತ ವರದಿಯೂ ಇಲ್ಲ. ಯಾವುದೇ ಆಸ್ಪತ್ರೆಗಳಲ್ಲೂ ಇದು ದಾಖಲಾಗಿಲ್ಲ.

ಸದ್ಯ ವೈರಲ್ ಆಗುತ್ತಿರುವ ದುಬೈ ವೈದ್ಯ ಡಾ. ರಿಯಾಜ್​ ಉಸ್ಮಾನ್​ ಜೀವಂತವಾಗಿದ್ದಾರೆ. ಹಾಗೇ ಪಾಕಿಸ್ತಾನದಲ್ಲಿ ಇದೇ ಹೆಸರಿನ ಓರ್ವ ವೈದ್ಯ ಕರೊನಾ ವೈರಸ್​ನಿಂದ ಮೃತಪಟ್ಟಿದ್ದು ದೃಢಪಟ್ಟಿದೆ.

ಪಾಕ್​ ವೈದ್ಯ ಡಾ. ರಿಯಾಜ್​ ಯಾತ್ರೆಗೆ ತೆರಳಿದ್ದರು. ಇರಾನ್​ನಿಂದ ಪಾಕ್​ಗೆ ಬಂದಾಗ ತೀವ್ರ ಜ್ವರ, ಕೆಮ್ಮಿನಿಂದ ಬಳಲುತ್ತಿದ್ದರು. ತಪಾಸಣೆಯಲ್ಲಿ ಕರೊನಾ ಇರುವುದು ದೃಢಪಟ್ಟಿತ್ತು. ಅದೇ ಸೋಂಕಿಗೆ ಬಲಿಯಾಗಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net