ಮುಸ್ಲಿಂ ಶಾಸಕರಿಗೆ ಶುಕ್ರವಾರ ಪ್ರಾರ್ಥನೆಗಿದ್ದ ವಿರಾಮ ರದ್ದು ಮಾಡಿದ ಅಸ್ಸಾಂ

assam cm
Published on

ಗುವಾಹಟಿ: ಶುಕ್ರವಾರದ ಪ್ರಾರ್ಥನೆ ಸಲ್ಲಿಸಲು ಮುಸ್ಲಿಂ ಶಾಸಕರಿಗೆ ಇದ್ದ ಎರಡು ಗಂಟೆಗಳ ವಿರಾಮವನ್ನು ಅಸ್ಸಾಂ ವಿಧಾನಸಭೆ ಶುಕ್ರವಾರ ರದ್ದು ಮಾಡಿದೆ. ಇನ್ನು ಮುಂದೆ ಮುಸ್ಲಿಂ ಶಾಸಕರಿಗೆ ಶುಕ್ರವಾರ ಪ್ರಾರ್ಥನೆಗೆ 2 ಗಂಟೆಗಳ ವಿರಾಮ ಇರುವುದಿಲ್ಲ.

ಸದನದ ಕಲಾಪವನ್ನು ಇತರ ದಿನಗಳಂತೆ ಶುಕ್ರವಾರವೂ ಮುಂದುವರಿಸಲು ವಿಧಾನಸಭೆ ನಿಯಮಗಳ ಸಮಿತಿ ಇಂದು ನಿರ್ಣಯವನ್ನು ಅಂಗೀಕರಿಸಿದೆ. ಮುಸ್ಲಿಂ ಶಾಸಕರು ನಮಾಜ್ ಪ್ರಾರ್ಥನೆಗೆ ಹಾಜರಾಗಲು ಅಸ್ಸಾಂ ವಿಧಾನಸಭೆಯನ್ನು ಶುಕ್ರವಾರದಂದು ಎರಡು ಗಂಟೆಗಳ ಕಾಲ ಮುಂದೂಡಲಾಗುತ್ತಿತ್ತು.

ಅಸ್ಸಾಂ ಶಾಸಕಾಂಗ ಸಭೆ ರಚನೆಯಾದಾಗಿನಿಂದ, ಮುಸ್ಲಿಂ ಶಾಸಕರಿಗೆ ಪ್ರಾರ್ಥನೆ ಸಲ್ಲಿಸಲು ಅನುಕೂಲವಾಗುವಂತೆ ಶುಕ್ರವಾರ ವಿಧಾನಸಭೆಯ ಅಧಿವೇಶನವನ್ನು ಬೆಳಿಗ್ಗೆ 11 ಗಂಟೆಗೆ ಮುಂದೂಡಲಾಗುತ್ತಿತ್ತು. ಮಧ್ಯಾಹ್ನದ ಊಟದ ನಂತರದ ಅಧಿವೇಶನದ ಕಲಾಪವನ್ನು ಪುನರಾರಂಭಿಸುತ್ತಿತ್ತು.

ಈ ಹೊಸ ನಿರ್ಧಾರದಿಂದ ಸದನದ ಉತ್ಪಾದಕತೆ ಹೆಚ್ಚಲಿದೆ ಎಂದು ಅಸ್ಸಾಂ ಸಿಎಂ ಹಿಮಂತಾ ಬಿಸ್ವಾ ಶರ್ಮಾ ಹೇಳಿದ್ದಾರೆ.

2 ಗಂಟೆಗಳ ಜುಮಾ ವಿರಾಮವನ್ನು ರದ್ದು ಮಾಡುವ ಮೂಲಕ ಅಸ್ಸಾಂ ವಿಧಾನಸಭೆಯು ಉತ್ಪಾದಕತೆಗೆ ಆದ್ಯತೆ ನೀಡಿದೆ. ಅಲ್ಲದೆ ವಸಾಹತು ಕಾಲದ ಆಚರಣೆಯನ್ನು ತಳ್ಳಿ ಹಾಕಿದೆ. ಈ ಪದ್ಧತಿಯನ್ನು ಮುಸ್ಲಿಂ ಲೀಗ್​ನ ಸೈಯದ್ ಸಾದುಲ್ಲಾ ಅವರು 1937ರಲ್ಲಿ ಪ್ರಾರಂಭಿಸಿದ್ದರು. ಈ ನಿರ್ಧಾರ ತೆಗೆದುಕೊಳ್ಳಲು ಕಾರಣರಾದ ಸ್ಪೀಕರ್ ಬಿಸ್ವಜಿತ್ ಡೈಮುರಿ ಹಾಗೂ ನಮ್ಮ ಪಕ್ಷದ ಶಾಸಕರಿಗೆ ಕೃತಜ್ಱತೆ ಸಲ್ಲಿಸುತ್ತೇನೆ ಎಂದು ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಮ್ಮ ಎಕ್ಸ್‌ನಲ್ಲಿ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net